Select Your Language

Notifications

webdunia
webdunia
webdunia
webdunia

ಸಂಸತ್ತಿನಲ್ಲಿ ಸಂಸದೆಗೆ ಲೈಂಗಿಕ ದೌರ್ಜನ್ಯ; ಆತ್ಮಹತ್ಯೆ ಬೆದರಿಕೆ

Pakistan woman
ಕರಾಚಿ , ಬುಧವಾರ, 25 ಜನವರಿ 2017 (15:10 IST)
ಪಾಕಿಸ್ತಾನದ ಸಂಸದೆಯೋರ್ವರು ಸಂಸತ್ತಿನಲ್ಲಿಯೇ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಾರೆ. ಇದರಿಂದ ಬೇಸತ್ತಿರುವ ಅವರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಒಡ್ಡಿದ ಪ್ರಹಸನ ಶನಿವಾರ ನಡೆದಿದೆ.

 
ಸಿಂಧ್ ಪ್ರದೇಶದ ಸಂಸದೆ ನಸ್ರತ್ ಸಹರ್ ಅಬ್ಬಾಸಿ, ಈ ಆರೋಪವನ್ನು ಮಾಡಿದ್ದು ಸಚಿವ ಇಮ್ದಾದ್ ಪಿಠಾಫಿ ಎನ್ನುವವರು ತನ್ನ ಖಾಸಗಿ ಚೇಂಬರ್‌ಗೆ ಬರುವಂತೆ ನನ್ನನ್ನು ಕರೆದಿದ್ದರು. ಇದು ನಮ್ಮಲ್ಲಿ  ಮಹಿಳಾ ರಕ್ಷಣಾ ಕಾನೂನುಗಳಿಗೆ ಬೆಲೆಯೇ ಇಲ್ಲ ಎನ್ನುವುದನ್ನು ತೋರಿಸುತ್ತದೆ. ಸಂಸದರಾದ ನಮಗೇ ರಕ್ಷಣೆ ಇಲ್ಲ ಎಂದ ಮೇಲೆ ಸಾಮಾನ್ಯ ಪ್ರಜೆಗಳ ಗತಿ ಏನು? ಸಂಸದನ ವರ್ತನೆಯನ್ನು ನಾನು ಬಲವಾಗಿ ಪ್ರತಿಭಟಿಸಿದೆ. ಆದರೆ ಸ್ವತಃ ಮಹಿಳೆಯಾಗಿರುವ ಸಭಾಪತಿ ಯಾವುದೇ ಕ್ರಮವನ್ನು ಕೈಗೊಳ್ಳಲು ನಿರಾಕರಿಸಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ. 
 
ಹತಾಶ ಅಬ್ಬಾಸಿ ಶನಿವಾರ ಪೆಟ್ರೋಲ್ ಬಾಟಲ್ ಎತ್ತಿಕೊಂಡು ಬಂದು, ಪಿಠಾಫಿ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ತಾವು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದಾರೆ. 
 
ಈ ಪ್ರಸಂಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದ್ದಂತೆ ಪಿಠಾಫಿ ಕ್ಷಮೆಯಾಚಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಮಾವೇಶ ನಿಲ್ಲುವುದಿಲ್ಲ: ವಿರೂಪಾಕ್ಷ