Select Your Language

Notifications

webdunia
webdunia
webdunia
webdunia

ಕಾಶ್ಮೀರ, ಪಂಜಾಬ್ ನಲ್ಲಿ 15 ದಿನಗಳಲ್ಲಿ ಉಗ್ರರಿಂದ ಭಾರೀ ದಾಳಿ ಸಾಧ್ಯತೆ

ಕಾಶ್ಮೀರ, ಪಂಜಾಬ್ ನಲ್ಲಿ 15 ದಿನಗಳಲ್ಲಿ ಉಗ್ರರಿಂದ ಭಾರೀ ದಾಳಿ ಸಾಧ್ಯತೆ
ನವದೆಹಲಿ , ಶನಿವಾರ, 10 ಜೂನ್ 2017 (17:43 IST)
ಶ್ರೀನಗರ: ಪಾಕ್ ಗುಪ್ತಚರ ಸಂಸ್ಥೆ ಐಎಸ್‌ಐ ಜಮ್ಮು-ಕಾಶ್ಮೀರ ಮತ್ತು ಪಂಜಾಬ್‌ ನಲ್ಲಿ ಇನ್ನು15 ದಿನಗಳಲ್ಲಿ ಭಾರೀ ವಿಧ್ವಂಸಕ ಕೃತ್ಯನಡೆಸಲು ಸಂಚು ರೂಪಿಸಿದ್ದು, ಇದಕ್ಕಾಗಿ ನಾಲ್ವರು ಉಗ್ರರು ಪಂಜಾಬ್‌ ಗಡಿ ಮೂಲಕ ದೇಶದೊಳಗೆ ನುಸುಳಿ ಬಂದಿದ್ದಾರೆ ಎಂದು ಭಾರತೀಯ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
 
ಜಮ್ಮು ಸಮೀಪದ ಕಥುವಾ, ಪಂಜಾಬ್‌ ನಲ್ಲಿನ ಗುರುದಾಸ್‌ಪುರ ಮತ್ತು ಪಠಾಣ್‌ಕೋಟ್‌ನಲ್ಲಿ  ಪಾಕ್‌ ಐಎಸ್‌ಐ ಆಯೋಜಿತ ಉಗ್ರರು ದಾಳಿಗಳನ್ನು ನಡೆಸುವ ಸಂಭವವಿದೆ. ಈ ಬಗ್ಗೆ ಸಾಕಷ್ಟು ಮುಂಜಾಗ್ರತೆ ಅಗತ್ಯ ಎಂದು ಗುಪ್ತಚರ ವರದಿ ತಿಳಿಸಿದೆ.  ನಾಲ್ಕು ಪಾಕ್‌ ಉಗ್ರರು ಪಂಜಾಬ್‌ ಗಡಿ ಮೂಲಕ ಬಮ್‌ತಾಲ್‌ ವಲಯದೊಳಗೆ ನುಸುಳಿ ಬಂದಿದ್ದಾರೆ. ಇವರು ಜಮ್ಮು ಕಾಶ್ಮೀರ ಮತ್ತು ಪಂಜಾಬ್‌ ನಲ್ಲಿ ಭಾರೀ ದೊಡ್ಡ ಉಗ್ರ ದಾಳಿಗಳನ್ನು ನಡೆಸುವ ಸಾಧ್ಯತೆ ಇದೆ.
 
ಪಂಜಾಬ್‌ ನಲ್ಲೀಗ ಅಡಗಿಕೊಂಡಿರುವ ಈ ಉಗ್ರರು ಪಾಕಿಸ್ಥಾನದಿಂದ ತಮಗೆ ಶಸ್ತ್ರಾಸ್ತ್ರಗಳು ಪೂರೈ ಕೆಯಾಗುವುದನ್ನೇ ಕಾಯುತ್ತಿದ್ದಾರೆ. ಮಾದಕ ದ್ರವ್ಯ ಕಳ್ಳಸಾಗಣೆದಾರನೋರ್ವನನ್ನು ಪಾಕ್‌ ಐಎಸ್‌ಐ ಕೊರಿಯರ್‌ ಆಗಿ ಬಳಸಿಕೊಳ್ಳುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಕುಮಾರಸ್ವಾಮಿಯದ್ದು ಹಿಟ್ ಆಂಡ್ ರನ್ ಕೇಸ್ ಕಣ್ರೀ : ಸಿಎಂ ಸಿದ್ದರಾಮಯ್ಯ