Select Your Language

Notifications

webdunia
webdunia
webdunia
webdunia

ಭಾರತೀಯ ಯೋಧರ ಶಿರಚ್ಛೇದ ನಡೆಸಲು ಹೊಂಚು ಹಾಕಿ ಬಂದ ಉಗ್ರನ ಹತ್ಯೆ

Pak BAT Terrorist
ಶ್ರೀನಗರ , ಶನಿವಾರ, 24 ಜೂನ್ 2017 (10:38 IST)
ಶ್ರೀನಗರ:ಭಾರತೀಯ ಯೋಧರ ಶಿರಚ್ಛೇದ ಮಾಡಲು ಸಿದ್ಧತೆ ನಡೆಸಿಕೊಂಡು ಬಂದಿದ್ದ ಪಾಕಿಸ್ತಾನಿ ಬ್ಯಾಟ್ ಪಡೆಯ ಉಗ್ರನೋರ್ವನನ್ನು ಭಾರತೀಯ ಯೋಧರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
 
ಭಾರತೀಯ ಯೋಧರ ಶಿರಚ್ಛೇದ ಮಾಡಲೆಂದು ಗಡಿ ನಿಯಂತ್ರಣ ರೇಖೆಯನ್ನು ಅಕ್ರಮವಾಗಿ ದಾಟಿ ಬಂದಿದ್ದ ಈತ ಪಾಕಿಸ್ತಾನ ಬಾರ್ಡರ್ ಆ್ಯಕ್ಷನ್ ಟೀಂನ ಸದಸ್ಯ ಎನ್ನಲಾಗಿದೆ. ಭಾರತೀಯ ಪೋಸ್ಚ್ ನಿಂದ ಕೇವಲ 200 ಮೀಟರ್ ದೂರದಲ್ಲಿ ಹೊಡೆದುರುಳಿಸಲಾಗಿದೆ. ಮೃತನಿಂದ ಹಲವು ಮಾರಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಭಾರತೀಯ ಯೋಧರ ಶಿರಚ್ಛೇದವನ್ನು ಚಿತ್ರೀಕರಿಸಲೆಂದು ತಂದಿದ್ದ ಹೆಡ್ ಬ್ಯಾಂಡ್ ಕ್ಯಾಮೆರಾ, ಡ್ರಾಗರ್, ಹರಿತವಾದ  ಚಾಕು, ಎಕೆ 47 ಬಂದೂಕು, ಗ್ರೆನೇಡ್ ಗಳು, 4 ಬುಲೆಟ್ ಗಳ ಕಾರ್ಟಿಡ್ಜ್ ಗಳನ್ನು ಸೈನಿಕರು ವಶಕ್ಕೆ ಪಡೆದಿದ್ದಾರೆ. 
 
ಸಧ್ಯ ಗಡಿಯುದ್ದಕ್ಕೂ ಹೈ ಅಲರ್ಟ್ ಘೋಷಿಸಲಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಡೊನಾಲ್ಡ್ ಟ್ರಂಪ್ ಜತೆ ಡಿನ್ನರ್ ಮಾಡುವ ಮೊದಲ ವಿಶ್ವ ನಾಯಕ ಪ್ರಧಾನಿ ಮೋದಿ