Select Your Language

Notifications

webdunia
webdunia
webdunia
webdunia

ಪಾಕ್ ಉಗ್ರ ರಾಷ್ಟ್ರ: ಭಾರತ

ಪಾಕ್ ಉಗ್ರ ರಾಷ್ಟ್ರ: ಭಾರತ
ವಿಶ್ವಸಂಸ್ಥೆ , ಗುರುವಾರ, 22 ಸೆಪ್ಟಂಬರ್ 2016 (17:11 IST)
ಪಾಕಿಸ್ತಾನ 'ಭಯೋತ್ಪಾದಕ ರಾಷ್ಟ್ರ', ನಮ್ಮ ವಿರುದ್ಧ ಭಯೋತ್ಪಾದನೆ ನಡೆಸುವುದನ್ನು ಸುದೀರ್ಘ ಕಾಲದ ನೀತಿಯನ್ನಾಗಿಸಿಕೊಂಡಿದೆ,  ಎಂದು ವಿಶ್ವಸಂಸ್ಥೆಯಲ್ಲಿ ಭಾರತ ಆರೋಪಿಸಿದೆ. 
ವಿಶ್ವಸಂಸ್ಥೆಯ 71 ನೇ ಸಾಮಾನ್ಯ ಸಭೆಯಲ್ಲಿ ಮಾತನ್ನಾಡುತ್ತಿದ್ದ ವಿಶ್ವಸಂಸ್ಥೆಯ ಭಾರತದ ಖಾಯಂ ಕಾರ್ಯದರ್ಶಿ ಏನಮ್ ಗಂಭೀರ್, ಪಾಕ್ ಬೆಂಬಲದೊಂದಿಗೆ ಉಗ್ರರು ತನ್ನ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಅವರು ಪಾಕಿಸ್ತಾನದ ಬೀದಿಗಳಲ್ಲಿ ಮುಕ್ತವಾಗಿ ಓಡಾಡುತ್ತಾರೆ. ನಮ್ಮ ದೇಶದ ವಿರುದ್ಧ ಅಪರಾಧ ಚಟುವಟಿಕೆಗಳನ್ನು ನಡೆಸುವುದನ್ನೇ ಪಾಕ್ ತನ್ನ ರಾಷ್ಟ್ರೀಯ ನೀತಿಯನ್ನಾಗಿಸಿಕೊಂಡಿದೆ ಎಂದು ಕಿಡಿಕಾರಿದ್ದಾರೆ.
 
ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ದೌರ್ಜನ್ಯ ನಡೆಸುತ್ತಿದೆ ಎಂಬ ಪಾಕ್ ಪ್ರಧಾನಿಯ ಆರೋಪಕ್ಕೆ ತಿರುಗೇಟು ನೀಡಿರುವ ಅವರು, ಮಾನವ ಹಕ್ಕುಗಳ ಅತ್ಯಂತ ಹೇಯ ಉಲ್ಲಂಘನೆ ಎಂದರೆ ಭಯೋತ್ಪಾದನೆ ಎಂದಿದ್ದಾರೆ. 
 
ಈ ನೀತಿಯಿಂದಾಗಿ ಭಾರತ ಸೇರಿದಂತೆ ಇತರೇ ರಾಷ್ಟ್ರಗಳು ಕಷ್ಟಕ್ಕೆ ಈಡಾಗಿವೆ. ಈಗ ಈ ಪರಿಸ್ಥಿತಿ ಕೈ ಮೀರಿದ್ದು ಭಯೋತ್ಪಾದನೆ ಸರ್ವವ್ಯಾಪಿಯಾಗಿ ಬಿಟ್ಟಿದೆ ಎಂದು ವಿಶ್ವಸಂಸ್ಥೆಗೆ ಮೊದಲ ಖಾಯಂ ಕಾರ್ಯದರ್ಶಿಯಾಗಿರುವ ಏನಮ್ ಉಗ್ರರಿಗೆ ತರಬೇತಿ, ಆರ್ಥಿಕ ಸಹಾಯ ಮತ್ತು ನೆರೆರಾಷ್ಟ್ರಗಳ ವಿಧ್ವಂಸಕ ಕೃತ್ಯ ನಡೆಸಲು ಪಾಕ್ ಅಂತರಾಷ್ಟ್ರೀಯ ನಿಧಿಯನ್ನೇ ವಿನಿಯೋಗಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಯವರು ಅಧಿವೇಶನ ಬಹಿಷ್ಕರಿಸಿದ್ರೆ ಓಡಾಡಲು ಬಿಡೋಲ್ಲ : ಕೆ.ಎಸ್.ನಂಜುಂಡೇಗೌಡ ಎಚ್ಚರಿಕೆ