Select Your Language

Notifications

webdunia
webdunia
webdunia
webdunia

ಭಾರತದಲ್ಲಿ ಕಳೆದವರ್ಷ 34,600 ರೇಪ್ ಪ್ರಕರಣಗಳು, ಮಧ್ಯಪ್ರದೇಶ ಅತ್ಯಧಿಕ

ಭಾರತದಲ್ಲಿ ಕಳೆದವರ್ಷ 34,600 ರೇಪ್ ಪ್ರಕರಣಗಳು, ಮಧ್ಯಪ್ರದೇಶ ಅತ್ಯಧಿಕ
ನವದೆಹಲಿ: , ಬುಧವಾರ, 31 ಆಗಸ್ಟ್ 2016 (19:07 IST)
ಇಡೀ ರಾಷ್ಟ್ರದಲ್ಲಿ ಕಳೆದ ವರ್ಷ 34,600 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, ಮಧ್ಯಪ್ರದೇಶ ಮತ್ತು ದೆಹಲಿ ಕುಖ್ಯಾತ ಪಟ್ಟಿಯಲ್ಲಿ ಮೇಲಿನ ಸ್ಥಾನಗಳನ್ನು ಅಲಂಕರಿಸಿವೆ.
 
2015ರಲ್ಲಿ 34, 651 ಪ್ರಕರಣಗಳು ವರದಿಯಾಗಿದ್ದು, 33, 098 ಪ್ರಕರಣಗಳಲ್ಲಿ ಅಪರಾಧಿಗಳು ಸಂತ್ರಸ್ತರಿಗೆ ಪರಿಚಿತರು ಎಂದು ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೊ ದತ್ತಾಂಶ ತಿಳಿಸಿದೆ. ರೇಪ್ ಪೀಡಿತರು 6 ರಿಂದ 60 ವರ್ಷ ವಯೋಮಾನದವರಾಗಿದ್ದರು. ಮಧ್ಯಪ್ರದೇಶದಲ್ಲಿ 4391 ರೇಪ್ ಪ್ರಕರಣಗಳು ದಾಖಲಾಗಿದ್ದು, ರಾಜ್ಯಗಳ ಪೈಕಿ ಅತ್ಯಧಿಕ ಪ್ರಮಾಣವಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ 2199 ಪ್ರಕರಣಗಳು ವರದಿಯಾಗಿದ್ದು, ಕೇಂದ್ರಾಡಳಿತ ಪ್ರದೇಶಗಳ ಪೈಕಿ ಅತ್ಯಧಿಕ.
 
ದೇಶಾದ್ಯಂತ ಮಹಿಳೆಯರ ವಿರುದ್ಧ 3.27 ಲಕ್ಷ ಅಪರಾಧ ಪ್ರಕರಣಗಳು ವರದಿಯಾಗಿವೆ. ಅವುಗಳ ಪೈಕಿ 1.3 ಲಕ್ಷ ಲೈಂಗಿಕ ಅಪರಾಧಗಳು. ಲೈಂಗಿಕ ಅಪರಾಧ ಪ್ರಕರಣಗಳಲ್ಲಿ ರೇಪ್, ರೇಪ್ ಪ್ರಯತ್ನ, ಶೀಲಭಂಗ ಮಾಡುವ ಉದ್ದೇಶದ ದೌರ್ಜನ್ಯ ಸೇರಿವೆ. 

Share this Story:

Follow Webdunia kannada

ಮುಂದಿನ ಸುದ್ದಿ

ಕಾರ್ಮಿಕರಿಗೆ ಕನಿಷ್ಟ ವೇತನ ದಿನಕ್ಕೆ 350 ರೂ.ಗೆ ಕೇಂದ್ರಸರ್ಕಾರ ಏರಿಕೆ