Daily Horoscope

Select Your Language

Notifications

webdunia
webdunia
webdunia
webdunia

ಗುಜರಾತ್ ನ ಗ್ರಾಮವೊಂದರಲ್ಲಿ ವಿಸ್ಮಯದ ಘಟನೆ.. ಮಳೆ ಬಳಿಕ ಅಲ್ಲಾಡುತ್ತಿದೆ ಬಾವಿ ನೀರು: Shocking Video

Viral video well
ಮೊರ್ಬಿ (ಗುಜರಾತ್): ಗುಜರಾತ್‌ನ ಮೊರ್ಬಿ ಜಿಲ್ಲೆಯ ವಿರ್ಪರ್ದಾ ಗ್ರಾಮದಲ್ಲಿರುವ ಭಾವಿಯೊಂದರಲ್ಲಿ ನೀರು ಸತತವಾಗಿ ಸಮುದ್ರದ ಅಲೆಗಳಂತೆ ತೂಗಾಡುತ್ತಾ, ಉಕ್ಕಿ ಹರಿಯುತ್ತಿರುವ ಅಪರೂಪದ ಹಾಗೂ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ.
 

ಯಾವುದೇ ಭೂಕಂಪ ಅಥವಾ ಯಾಂತ್ರಿಕ ಪ್ರಭಾವವಿಲ್ಲದೇ ಬಾವಿಯ ನೀರು ಹೀಗೆ ಅಲೆಅಲೆಯಾಗಿ ವಿಸ್ಮಯಕಾರಿಯಾಗಿ ಕದಲುತ್ತಿರುವುದು ಸ್ಥಳೀಯರಲ್ಲಿ ಭಾರೀ ಕುತೂಹಲ ಹಾಗೂ ಆತಂಕವನ್ನು ಮೂಡಿಸಿದೆ.
 

 
ಜಿಲ್ಲಾಧಿಕಾರಿಗಳಿಂದ ತನಿಖೆಗೆ ಆದೇಶ

 
ಬಾವಿಯ ನೀರು ನಿರಂತರವಾಗಿ ತೂಗಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಮೊರ್ಬಿ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಅಧಿಕಾರಿಗಳನ್ನು ಕಳುಹಿಸಿ ತಕ್ಷಣದ ತನಿಖೆಗೆ ಆದೇಶಿಸಿದ್ದಾರೆ.

ಪ್ರಾಥಮಿಕ ಪರಿಶೀಲನೆ ನಡೆಸಿದ ಭೂವಿಜ್ಞಾನಿಗಳು, ಇತ್ತೀಚೆಗೆ ಸುರಿದ ಭಾರಿ ಮಳೆಯ ನೀರು ಭೂಮಿಯ ಆಳಕ್ಕೆ ಇಂಗಿದಾಗ ಕಲ್ಲು ಮತ್ತು ಮಣ್ಣಿನ ನಡುವೆ ಸಿಲುಕಿಕೊಂಡಿದ್ದ ಅನಿಲ ಅಥವಾ ಗಾಳಿಯ ಒತ್ತಡದಿಂದಾಗಿ ನೀರು ಈ ರೀತಿ ಉಕ್ಕಿ ಮೇಲೇಳುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಆರಂಭದಲ್ಲಿ ಸ್ಥಳೀಯರು ಭೂಕಂಪದ ಭೀತಿಯಲ್ಲಿದ್ದರು. ಆದರೆ ಭೂಕಂಪಶಾಸ್ತ್ರದ ರಿಪೋರ್ಟ್‌ಗಳನ್ನು ಪರಿಶೀಲಿಸಿದಾಗ ಯಾವುದೇ ರೀತಿಯ ಭೂಕಂಪನದ ಲಕ್ಷಣಗಳು ಅಥವಾ ಕಂಪನಗಳು ದಾಖಲಾಗಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಈ ವಿಸ್ಮಯಕಾರಿ ಘಟನೆಯ ಸುದ್ದಿ ಹರಡುತ್ತಿದ್ದಂತೆ ಸುತ್ತಮುತ್ತಲ ಗ್ರಾಮಗಳಿಂದ ನೂರಾರು ಜನರು ಬಾವಿಯನ್ನು ವೀಕ್ಷಿಸಲು ಧಾವಿಸುತ್ತಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಬಾವಿಯ ಸುತ್ತಲೂ ಭದ್ರತೆ ಹೆಚ್ಚಿಸಲಾಗಿದ್ದು, ಸಾರ್ವಜನಿಕರು ಹತ್ತಿರ ಹೋಗದಂತೆ ತಡೆಯಲಾಗಿದೆ. ತಜ್ಞರ ತಂಡವು ನೀರಿನ ಮಾದರಿಯನ್ನು ಸಂಗ್ರಹಿಸಿ ಹೆಚ್ಚಿನ ಸಂಶೋಧನೆ ನಡೆಸುತ್ತಿದೆ.

pic.twitter.com/J0Ba31gH7X

 

— News Algebra (@NewsAlgebraIND) August 6, 2026

Share this Story:

Follow Webdunia kannada

ಮುಂದಿನ ಸುದ್ದಿ

ಎಂಥಾ ಹೃದಯವಂತ ಮಹಿಳೆ ಈಕೆ... ಆಟೋ ಚಾಲಕನ ಜೊತೆ ನಡೆದುಕೊಂಡ ರೀತಿಗೆ ನೀವೂ ಫಿದಾ ಆಗ್ತೀರಿ Video