Select Your Language

Notifications

webdunia
webdunia
webdunia
webdunia

ಈ ಕಾರಣಕ್ಕೆ ಗೆಳತಿಯ ಅಜ್ಜಿ ಮತ್ತು ಸಹೋದರನನ್ನು ಕೊಂದ ಯುವಕ

ಈ ಕಾರಣಕ್ಕೆ  ಗೆಳತಿಯ ಅಜ್ಜಿ ಮತ್ತು ಸಹೋದರನನ್ನು ಕೊಂದ ಯುವಕ
ನಾಗ್ಪುರ , ಶನಿವಾರ, 12 ಡಿಸೆಂಬರ್ 2020 (07:02 IST)
ನಾಗ್ಪುರ : 17 ವರ್ಷದ ಯುವಕ ತನ್ನ ಸಂಬಂಧದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಗೆಳತಿಯ 10 ವರ್ಷದ ಸಹೋದರ ಮತ್ತು 60 ವರ್ಷದ ಅಜ್ಜಿಯನ್ನು ಕೊಲೆ ಮಾಡಿದ ಘಟನೆ  ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.

ಹುಡುಗ ಒಂದು ವರ್ಷದ ಹಿಂದೆ ಸಾಮಾಜಿಕ ಮಾದ್ಯಮದಲ್ಲಿ 20 ವರ್ಷದ ಯುವತಿಯ ಪರಿಚಯ ಮಾಡಿಕೊಂಡಿದ್ದಾನೆ. ಬಳಿಕ ಅವರಿಬ್ಬರ ನಡುವೆ ಸಂಬಂಧ ಬೆಳೆದಿತ್ತು. ಆದರೆ ಅವರಿಬ್ಬರು ಬೇರೆ ಸಮುದಾಯಕ್ಕೆ ಸೇರಿದವರಾದ್ದರಿಂದ ಇದಕ್ಕೆ ಹುಡುಗಿ  ಮನೆಯವರ ಆಕ್ಷೇಪವಿತ್ತು. ಈ ಕಾರಣದಿಂದ ಕೋಪಗೊಂಡ ಹುಡುಗ ಇಂತಹ ಘೋರ ಕೃತ್ಯ ಎಸಗಿದ್ದಾನೆ.

ಈ ಬಗ್ಗೆ ಗಿಟ್ಟಿಖಾಡನ್ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಪಾ ಮತ್ತು ಮಸಾಜ್ ಸೆಂಟರ್ ಹೆಸರಿನಲ್ಲಿ ಇಲ್ಲಿ ನಡೆಯುತ್ತಿದ್ದದೇನು?