ಶಬರಿಮಲೆಯಲ್ಲಿ ಕಳ್ಳತನವಾದ ಚಿನ್ನ ಪತ್ತೆಯಾದ ಬಗ್ಗೆ ವಿಪಕ್ಷ ನಾಯಕ ಸತೀಶನ್ ಸ್ಫೋಟಕ ಹೇಳಿಕೆ

Sampriya
ಶನಿವಾರ, 25 ಅಕ್ಟೋಬರ್ 2025 (17:45 IST)
ಕೊಚ್ಚಿ:  ವಿವಾದ ಸೃಷ್ಟಿಸಿರುವ ಶಬರಿಮಲೆ ದೇವಸ್ಥಾನದ ಚಿನ್ನ ಕಳುವು ಸಂಬಂಧ ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಡಿ ಸತೀಶನ್ ಪ್ರತಿಕ್ರಿಯಿಸಿ, ಕಳುವಾಗಿದ್ದ ಚಿನ್ನವು ಕೋಟ್ಯಧಿಪತಿಯ ಮನೆಯಿಂದ ವಶಪಡಿಸಿಕೊಳ್ಳಲಾಗಿದೆ ಎಂದರು.

ಶ್ರೀಕೋವಿಲ್ (ಗರ್ಭಗುಡಿ) ಬಾಗಿಲಿನ ಚೌಕಟ್ಟಿನ ಚಿನ್ನದ ಲೇಪನ ಕೆಲಸಕ್ಕಾಗಿ ಆರ್ಥಿಕ ನೆರವು ಒದಗಿಸಿದ್ದ ಕರ್ನಾಟಕ ಮೂಲದ ಉದ್ಯಮಿ ಗೋವರ್ಧನ್ ಅವರ ಒಡೆತನದ ಆಭರಣ ಅಂಗಡಿಯಿಂದ ವಿಶೇಷ ತನಿಖಾ ತಂಡ (ಎಸ್‌ಐಟಿ) ಹಲವಾರು ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದೆ ಎಂದು ಸತೀಶನ್ ಉಲ್ಲೇಖ ಮಾಡಿದ್ದಾರೆ.

ಎಸ್‌ಐಟಿ ಬಂಧನದ ನಂತರ, ಈ ಯೋಜನೆಯನ್ನು ಬೆಂಗಳೂರು ಮೂಲದ ಉದ್ಯಮಿ ಉನ್ನಿಕೃಷ್ಣನ್ ಪೊಟ್ಟಿ ಅಧಿಕೃತವಾಗಿ ಪ್ರಾಯೋಜಿಸಿದ್ದಾರೆ.

‘ಕದ್ದ ಚಿನ್ನವನ್ನು ಕೋಟ್ಯಧಿಪತಿಗೆ ಮಾರಾಟ ಮಾಡಲಾಗಿದೆ ಎಂದು ನಾವು (ವಿರೋಧ ಪಕ್ಷ ಕಾಂಗ್ರೆಸ್) ಹೇಳಿದ್ದು ಸರಿಯಾಗಿದೆ. ಈ ವಿಷಯದಲ್ಲಿ ವಿರೋಧ ಪಕ್ಷದ ಎಲ್ಲಾ ಆರೋಪಗಳೂ ನಿಜವಾಗಿವೆ’ ಎಂದಿದ್ದಾರೆ.

ಎಸ್‌ಐಟಿ ನಡೆಸಿದ ತನಿಖೆಯೂ ಪ್ರತಿಪಕ್ಷಗಳ ಹೇಳಿಕೆಗಳು ಸರಿ ಎಂದು ಸಾಬೀತುಪಡಿಸಿದ್ದು, ಅದಕ್ಕಾಗಿಯೇ ಪ್ರಸ್ತುತ ದೇವಸ್ವಂ ಸಚಿವ ವಿ.ಎನ್. ವಾಸವನ್ ರಾಜೀನಾಮೆ ನೀಡಬೇಕು ಮತ್ತು ಟಿಡಿಬಿಯನ್ನು ವಿಸರ್ಜಿಸಬೇಕೆಂದು ನಾವು ಒತ್ತಾಯಿಸುತ್ತಿದ್ದೇವೆ ಎಂದು ಸತೀಶನ್ ಹೇಳಿದರು. 

ಅಯ್ಯಪ್ಪ ದೇಗುಲದಿಂದ ಚಿನ್ನ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಟ್ಟಿ ಮತ್ತು ದೇವಸ್ವಂನ ಮಾಜಿ ಆಡಳಿತಾಧಿಕಾರಿ ಬಿ. ಮುರಾರಿ ಬಾಬು ಅವರನ್ನು ಎಸ್‌ಐಟಿ ಬಂಧಿಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸದನದಲ್ಲಿ ಜೇಬು ತೋರಿಸಿ ಪೆನ್ ಡ್ರೈವ್ ತೆಗೆಯುತ್ತೇನೆಂದು ಹೇಳಿದಾಗಲ್ಲ: ಎಚ್‌ಡಿಕೆಗೆ ಸವಾಲೆಸೆದ ಡಿಕೆ ಶಿವಕುಮಾರ್

ಕೆಂಪೇಗೌಡರ ಕನಸನ್ನು 5 ತುಂಡು ಮಾಡಿದ ಕಾಂಗ್ರೆಸ್ಸಿಗರು: ಛಲವಾದಿ ನಾರಾಯಣಸ್ವಾಮಿ

ಸಚಿವ ಸ್ಥಾನ ಬಿಡುವ ಬಗ್ಗೆ ಸ್ಫೋಟಕ ಹೇಳಿಕೆ ಕೊಟ್ಟ ಸಚಿವ ಕೃಷ್ಣ ಬೈರೇಗೌಡ

ED ಆಡಿಟ್ ಆಗಲಿ, ತನಿಖೆಗೆ ನಾವು ಸಿದ್ದ, ನಿಮ್ಮ RSS ಸಿದ್ದವೇ

ಥಾಯ್ಲೆಂಡ್‌ನಲ್ಲಿ 66 ವರ್ಷ ರಾಣಿಯಾಗಿ ಮೆರೆದಿದ್ದ ರಾಜಮಾತೆ ಸಿರಿಕಿತ್ ಕಿತಿಯಾಕಾರ್ ಇನ್ನಿಲ್ಲ

ಮುಂದಿನ ಸುದ್ದಿ
Show comments