Select Your Language

Notifications

webdunia
webdunia
webdunia
webdunia

ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲೆಂದೇ ಒಬ್ಬ ಸಚಿವ

ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲೆಂದೇ ಒಬ್ಬ ಸಚಿವ
Luknow , ಸೋಮವಾರ, 1 ಮೇ 2017 (19:10 IST)
ಲಕ್ನೋ: ಉತ್ತರ ಪ್ರದೇಶ ಸಿಎಂ ಯೋಗಿ ತಮ್ಮ ರಾಜ್ಯದ ಜನತೆಯ ಸಮಸ್ಯೆಗಳನ್ನು ಆಲಿಸಲೆಂದೇ ದಿನಕ್ಕೊಬ್ಬ ಸಚಿವರನ್ನು ನೇಮಿಸಿದ್ದಾರೆ. ಅಂದರೆ ದಿನಕ್ಕೊಬ್ಬರಂತೆ ಸಚಿವರು ಸಾರ್ವಜನಿಕರಿಗೆ ಲಭ್ಯರಿರಲಿದ್ದಾರೆ.

 
ಇದರ ಮೊದಲ ಭಾಗವಾಗಿ ಇಂದು ಕೃಷಿ ಸಚಿವ ಸೂರ್ಯ ಪ್ರತಾಪ್ ಸಾಹಿ ಮೊದಲ ಸಾರ್ವಜನಿಕ ಸಭೆ ನಡೆಸಿದರು. ಜನರೊಂದಿಗೆ ನೇರ ಸಂಪರ್ಕ ಸಾಧಿಸಲು ಮತ್ತು ಸಮಸ್ಯೆಗಳನ್ನು ಆಲಿಸಲು ಈ ಕ್ರಮ ಕೈಗೊಂಡಿದ್ದಾರೆ.

’15 ವರ್ಷಗಳ ನಂತರ ಉತ್ತರ ಪ್ರದೇಶದಲ್ಲಿ ಬೇರೆ ಸರ್ಕಾರ ಬಂದಿದೆ. ಜನ ಬದಲಾವಣೆ ಬಯಸಿ ನಮಗೆ ವೋಟ್ ಹಾಕಿದ್ದಾರೆ. ಹಾಗಿರುವಾಗ ಅವರ ನಿರೀಕ್ಷೆಗೆ ತಕ್ಕಂತೆ ನಡೆದುಕೊಳ್ಳುವುದು ನಮ್ಮ ಕರ್ತವ್ಯ’ ಎಂದು ಸಾಹಿ ಹೇಳಿದ್ದಾರೆ.

ಸಿಎಂ ಆದಾಗಿನಿಂದ ಕೇಂದ್ರ ಬಿಂದುವಾಗಿರುವ ಸಿಎಂ ಯೋಗಿ ಹಲವು ವಿಶಿಷ್ಟ ಕಾರ್ಯಕ್ರಮಗಳ ಮೂಲಕ ಜನರ ಗಮನ ಸೆಳೆಯುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಸೆಲ್ಫೀ ತೆಗೆಯುವ ಹುಚ್ಚಿನಲ್ಲಿ ಈ ಬಾಲಕ ಮಾಡಿದ್ದೇನು?