Select Your Language

Notifications

webdunia
webdunia
webdunia
webdunia

ಮತ್ತೆ ಪಠಾನ್‌ಕೋಟ್ ವಾಯುನೆಲೆಯ ಮೇಲೆ ದಾಳಿಗೆ ಉಗ್ರರ ಯತ್ನ

ಮತ್ತೆ ಪಠಾನ್‌ಕೋಟ್ ವಾಯುನೆಲೆಯ ಮೇಲೆ ದಾಳಿಗೆ ಉಗ್ರರ ಯತ್ನ
ಪಠಾನ್‌ಕೋಟ್ , ಮಂಗಳವಾರ, 14 ಮಾರ್ಚ್ 2017 (18:33 IST)
ಪಠಾನ್‌ಕೋಟ್ ವಾಯುನೆಲೆಯ ಮೇಲೆ ಮತ್ತೆ ಉಗ್ರರು ದಾಳಿಗೆ ಯತ್ನಿಸಿದ್ದಾರೆ ಎನ್ನುವ ಅನುಮಾನಗಳ ಹಿನ್ನೆಲೆಯಲ್ಲಿ ವಾಯುನೆಲೆಯ ಪ್ರದೇಶದಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ.
 
ಕೆಲ ಅಪರಿಚಿತ ವ್ಯಕ್ತಿಗಳ ಅನುಮಾನಾಸ್ಪದ ಚಟುವಟಿಕೆ ಕಂಡು ಬಂದಿದ್ದರಿಂದ ಪಠಾನ್‌ಕೋಟ್ ಸುತ್ತಮುತ್ತ ಪ್ರದೇಶದಲ್ಲಿ ಶೋಧ ಕಾರ್ಯ ಆರಂಭಿಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
 
ಕಳೆದ 2016 ಜನವರಿ 2 ರಂದು ಪಠಾನ್‌‍ಕೋಟ್  ವಾಯುನೆಲೆಯಲ್ಲಿ, ಭಾರತೀಯ ವಾಯುಪಡೆಯ ಪಶ್ಚಿಮ ಏರ್ ಕಮಾಂಡ್ ಭಾಗದ ಮೇಲೆ ಸಶಸ್ತ್ರ ಭಯೋತ್ಪಾದಕರ ಗುಂಪು ದಾಳಿಮಾಡಿತು. ಅದು ಒಂದು ಭಯೋತ್ಪಾದಕರ ದಾಳಿ ಆಗಿತ್ತು.
 
ಇದರಲ್ಲಿ ನಾಲ್ಕು ದಾಳಿಕೋರರು ಮತ್ತು ಎರಡು ಭದ್ರತಾ ಪಡೆಗಳ ಸಿಬ್ಬಂದಿ ಕೊಲ್ಲಲ್ಪಟ್ಟರು. ಹೆಚ್ಚುವರಿ ಭದ್ರತಾ ಸದಸ್ಯರು ಗಾಯಗಳಿಂದ ಕೆಲವು ಗಂಟೆಗಳ ನಂತರ ಸಾವು ಕಂಡರು. ಆರಂಭದ ಘರ್ಷಣೆಯ ಲ್ಲಿ ಹೀಗೆ ಕೊಲ್ಲಲ್ಪಟ್ಟರು. ನಂತರದ ಶೋಧನೆ ಕಾರ್ಯಾಚರಣೆ 2 ಜನವರಿ 17 ಗಂಟೆಗಳವರೆಗೆ ನಡೆಯಿತು. 
 
ಇದರಲ್ಲಿ ಐದು ದಾಳಿಕೋರರು ಮತ್ತು ಮೂರು ಭದ್ರತಾ ಸಿಬ್ಬಂದಿ ಸತ್ತರು ಆಸ್ಪತ್ರೆಗೆ ದಾಖಲಾದ ನಂತರ ಮತ್ತೂ ಮೂರು ಸೈನಿಕರು ನಿಧನರಾದರು. ಪರಿಣಾಮವಾಗಿ ಸಾವುಗಳ ಸಂಖ್ಯೆಯು ಆರು ಸೈನಿಕರಿಗೆ ಏರಿತು. ಜನವರಿ 3 ರಂದು ಮತ್ತೆ ಗುಂಡುಗಳ ಸದ್ದು ಕೇಳಿಸಿದವು, ಇನ್ನೊಬ್ಬ ಭದ್ರತಾ ಅಧಿಕಾರಿ. ಒಂದು LED ಸ್ಫೋಟದಲ್ಲಿ ಮರಣಹೊಂದಿದರು.
 
ಕಾರ್ಯಾಚರಣೆ ಜನವರಿ 4 ರಂದು ಮುಂದುವರಿಯಿತು, ಮತ್ತು ಐದನೇ ಆಕ್ರಮಣಕಾರ ಕೊಲ್ಲಲ್ಪಟ್ಟನೆಂದು ದೃಢಪಡಿಸಿದರು. ಅಂತಿಮ ಭಯೋತ್ಪಾದಕ 5 ಸಾವನ್ನಪ್ಪಿದ ವರದಿಯಾಯಿತು ಜನವರಿ 5 ರಂದು ಮತ್ತಷ್ಟು ಹುಡುಕಾಟಗಳು ಕೆಲವು ಕಾಲ ಮುಂದುವರೆಯಿತು. ಭಯೋತ್ಪಾದಕ ವಿರೋಧಿ ಕಾರ್ಯಾಚರಣೆ ನಿಂತಿದೆ ಎಂದು 5 ರಂದು ಸೇನಾಧಿಕಾರಿಗಳು ಘೋಷಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಗೋವಾ ಸಿಎಂ ಆಗಿ ಮನೋಹರ್ ಪರಿಕ್ಕರ್ ಪದಗ್ರಹಣ