Select Your Language

Notifications

webdunia
webdunia
webdunia
webdunia

ಕೊನೆಯುಸಿರೆಳೆದ ಭಾರತದ ಹಿರಿಯ ಮಹಿಳೆ

ಕೊನೆಯುಸಿರೆಳೆದ ಭಾರತದ ಹಿರಿಯ ಮಹಿಳೆ
ತ್ರಿಶೂರ್ , ಬುಧವಾರ, 25 ಮಾರ್ಚ್ 2015 (11:06 IST)
ದೇಶದ ಎಲ್ಲರಿಗಿಂತ ವೃದ್ಧ ಮಹಿಳೆ ಎಂದು ಗುರುತಿಸಲ್ಪಟ್ಟಿದ್ದ ಕೇರಳದ ತ್ರಿಶೂರದ 112 ವರ್ಷದ ಕುಂಜನನಾಮಾ ಆ್ಯಂಟನಿ ಮಂಗಳವಾರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 

ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರನ್ನು ಸೋಮವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರ ಬೆಳಿಗ್ಗೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಅವರ ಪರಿವಾರದ ಮೂಲಗಳು ತಿಳಿಸಿವೆ. 
 
ಕುಂಜನನಾಮಾ ಮೇ 20, 1903ರಲ್ಲಿ ಜನಿಸಿದ್ದರು ಎಂಬುದಕ್ಕೆ ಅವರ ಕುಟುಂಬದ ಬಳಿ ಪ್ರಮಾಣಪತ್ರವಿದೆ. 
 
ದೇಶದ ಅತಿ ಹಿರಿಯ ವಯಸ್ಸಿನ ಮಹಿಳೆ ಎಂದು ಪರಿಗಣಿಸಿ ಅವರ ಹೆಸರನ್ನು 2014ರಲ್ಲಿ ಲಿಮ್ಕಾ ದಾಖಲೆ ಪುಸ್ತಕದಲ್ಲಿ ಸೇರಿಸಲಾಗಿತ್ತು.ಅವರು ಅವಿವಾಹಿತರಾಗಿದ್ದರು. 

Share this Story:

Follow Webdunia kannada