ಮಹಿಳಾ ನ್ಯಾಯಮೂರ್ತಿಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೇ ಅಸಭ್ಯವಾಗಿ ವರ್ತಿಸಿದ 40 ವರ್ಷ ವಯಸ್ಸಿನ ಓಲಾ ಕ್ಯಾಬ್ ಚಾಲಕನನ್ನು ಉತ್ತರ ದೆಹಲಿಯ ಕಮಲಾ ನಗರ ಮಾರ್ಕೆಟ್ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಘಟನೆ ಮಂಗಳವಾರದಂದು ನಡೆದಿದೆಯಾದರೂ ನ್ಯಾಯಮೂರ್ತಿ, ಬುಧವಾರದಂದು ಪೊಲೀಸ್ ಠಾಣೆಯಲ್ಲಿ ಆರೋಪಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಆರೋಪಿ ಚಾವಕನ ವಿರುದ್ಧ ರೂಪ್ ನಗರ್ ಪೊಲೀಸ್ ಠಾಣೆಯಲ್ಲಿ ಮಹಿಳಾ ನ್ಯಾಯಮೂರ್ತಿಯ ದೂರು ದಾಖಲಾದ ನಂತರ ಆರೋಪಿ ಸಂದೀಪ್ ಕುಮಾರ್ನನ್ನು ಗುರ್ಗಾಂವ್ ಪ್ರದೇಶದಿಂದ ವಶಕ್ಕೆ ತೆಗೆದುಕೊಳ್ಳಲಾಯಿತು ಎಂದು ಡಿಸಿಪಿ ಮಧುರ್ ವರ್ಮಾ ತಿಳಿಸಿದ್ದಾರೆ.
ತನಿಖೆಗಾಗಿ ಪೊಲೀಸ್ ಠಾಣೆಗೆ ಆಗಮಿಸುವಂತೆ ಕ್ಯಾಬ್ ಚಾಲಕನಿಗೆ ಮನವಿ ಮಾಡಿದ್ದರೂ ಗೈರುಹಾಜರಾಗಿದ್ದರಿಂದ ಇಂದು ಆತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಡಿಸಿಪಿ ಮಧುರ್ ವರ್ಮಾ ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.