Select Your Language

Notifications

webdunia
webdunia
webdunia
webdunia

ಧಗಧಗನೆ ಉರಿದ ತೈಲ ಟ್ಯಾಂಕರ್‌, ವಂದೇ ಭಾರತ್‌ ಸೇರಿ 8ರೈಲುಗಳು ಸಂಚಾರ ರದ್ದು

ತೈಲ ಟ್ಯಾಂಕರ್ ಬೆಂಕಿ ಘಟನೆ

Sampriya

ಚೆನ್ನೈ , ಭಾನುವಾರ, 13 ಜುಲೈ 2025 (11:30 IST)
Photo Credit X
ಚೆನ್ನೈ: ಭಾನುವಾರ ಮುಂಜಾನೆ ಚೆನ್ನೈನಿಂದ ಬೆಂಗಳೂರಿಗೆ ಇಂಧನ ಸಾಗಿಸುತ್ತಿದ್ದ ಟ್ಯಾಂಕರ್ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪ್ರೀಮಿಯಂ ವಂದೇ ಭಾರತ್ ಮತ್ತು ಶತಾಬ್ದಿ ಎಕ್ಸ್‌ಪ್ರೆಸ್‌ಗಳು ಸೇರಿದಂತೆ ಕನಿಷ್ಠ ಎಂಟು ರೈಲುಗಳು ಬೆಂಗಳೂರು, ಮೈಸೂರು ಮತ್ತು ಕೊಯಮತ್ತೂರ್‌ಗೆ ರದ್ದಾಗಿವೆ.

ತಿರುವಳ್ಳೂರು ರೈಲು ನಿಲ್ದಾಣದ ಬಳಿ ಭಾನುವಾರ ಮುಂಜಾನೆ ಬೆಂಕಿ ಕಾಣಿಸಿಕೊಂಡಿದ್ದು, ರೈಲು ಮತ್ತು ಹಳಿಗಳಿಂದ ದಟ್ಟವಾದ ಹೊಗೆ ಹೊರಹೊಮ್ಮುತ್ತಿದೆ.

ರೈಲ್ವೆ ಅಧಿಕಾರಿಗಳೊಂದಿಗೆ ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳನ್ನು ತಕ್ಷಣವೇ ನಿಯೋಜಿಸಲಾಯಿತು ಮತ್ತು ಸ್ಥಳದಲ್ಲಿ ಪರಿಸ್ಥಿತಿಯನ್ನು ಸಕ್ರಿಯವಾಗಿ ನಿರ್ವಹಿಸುತ್ತಿದ್ದಾರೆ. ಮರುಸ್ಥಾಪನೆ ಕಾರ್ಯ ಪ್ರಗತಿಯಲ್ಲಿದೆ ಮತ್ತು ಸಾಮಾನ್ಯ ರೈಲು ಕಾರ್ಯಾಚರಣೆಗಳು ಶೀಘ್ರದಲ್ಲಿ ಪುನರಾರಂಭಗೊಳ್ಳುತ್ತವೆ ಎಂದು ದಕ್ಷಿಣ ರೈಲ್ವೆಯ ಹೇಳಿಕೆ ತಿಳಿಸಿದೆ.

ಮುನ್ನೆಚ್ಚರಿಕೆ ಮತ್ತು ಸುರಕ್ಷತಾ ಕ್ರಮವಾಗಿ, ಚೆನ್ನೈ-ಅರಕ್ಕೋಣಂ ವಿಭಾಗದಲ್ಲಿ ಎಲ್ಲಾ ಇಎಂಯು ಸ್ಥಳೀಯ ರೈಲು ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಚೆನ್ನೈನಿಂದ ಮೈಸೂರು ಮತ್ತು ಕೊಯಮತ್ತೂರಿಗೆ ವಂದೇ ಭಾರತ್ ಮತ್ತು ಶಾದಾಬ್ತಿ ಸೇವೆಗಳು ಸೇರಿದಂತೆ ಎಂಟು ಎಕ್ಸ್‌ಪ್ರೆಸ್ ರೈಲುಗಳನ್ನು ರದ್ದುಗೊಳಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಲ್ಪನಿಕ, ಸುಳ್ಳು ಮಾಹಿತಿ ಪ್ರಸಾರ ಆರೋಪ: ಯೂಟ್ಯೂಬರ್‌ ಸಮೀರ್ ಎಂ.ಡಿ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಎಫ್‌ಐಆರ್‌