Select Your Language

Notifications

webdunia
webdunia
webdunia
webdunia

ಒಡಿಶಾ ರೈಲು ದುರಂತದ ತನಿಖೆ ಸಿಬಿಐಗೆ

ಒಡಿಶಾ ರೈಲು ದುರಂತದ ತನಿಖೆ ಸಿಬಿಐಗೆ
ಭುವನೇಶ್ವರ , ಸೋಮವಾರ, 5 ಜೂನ್ 2023 (10:30 IST)
ಭುವನೇಶ್ವರ : ಒಡಿಶಾದಲ್ಲಿ ಸಂಭವಿಸಿದ ಮೂರು ರೈಲು ಅಪಘಾತದ ತನಿಖೆ ಕೇಂದ್ರೀಯ ತನಿಖಾ ಸಂಸ್ಥೆ ಹೆಗಲಿಗೆ ಬಿದ್ದಿದೆ.
 
ಒಡಿಶಾ ರೈಲು ಅಪಘಾತ ಸಂಬಂಧ ತನಿಖೆಯನ್ನು ಸಿಬಿಐ ತನಿಖೆಗೆ ರೈಲ್ವೇ ಮಂಡಳಿ ಶಿಫಾರಸು ಮಾಡಿದೆ ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ದುರಂತ ನಡೆದ ಸ್ಥಳದಲ್ಲಿರುವ ಅಶ್ವಿನಿ ವೈಷ್ಣವ್, ಅಪಘಾತ ಹೇಗಾಯ್ತು?, ಆಡಳಿತವು ಹೊಂದಿರುವ ಮಾಹಿತಿಯನ್ನು ಗಮನದಲ್ಲಿಟ್ಟುಕೊಂಡು ರೈಲ್ವೇ ಮಂಡಳಿಯು ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಶಿಫಾರಸು ಮಾಡಿದೆ ಎಂದು ತಿಳಿಸಿದರು. 

ಒಡಿಶಾ ಬಾಲಸೋರ್ನ ಬಹನಾಗ ಬಜಾರ್ ರೈಲು ನಿಲ್ದಾಣದಲ್ಲಿ ನಡೆದ ಅಪಘಾತದಲ್ಲಿ 275 ಮಂದಿ ಮೃತಪಟ್ಟಿದ್ದು ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಸಿಗ್ನಲಿಂಗ್ನಲ್ಲಿ ದೋಷ ಪತ್ತೆಯಾಗಿರುವುದು ತಿಳಿದು ಬಂದಿದೆ. ಗೂಡ್ಸ್ ರೈಲು ಹಳಿ ತಪ್ಪಿರಲಿಲ್ಲ. ಹಳಿ ತಪ್ಪಿದ ಕೋರಮಂಡಲ್ ಎಕ್ಸ್ಪ್ರೆಸ್ ಬೋಗಿಗಳು ಇನ್ನೊಂದು ಮುಖ್ಯ ಹಳಿ ಮೇಲೆ ಬಿದ್ದ ಪರಿಣಾಮ ಗರಿಷ್ಠ ಮಟ್ಟದ ಸಾವು ನೋವು ಸಂಭವಿಸಿದೆ. ಕೋರಮಂಡಲ್ ಎಕ್ಸ್ಪ್ರೆಸ್ನ ಹಳಿತಪ್ಪಿದ ಬೋಗಿಗಳು ಗಂಟೆಗೆ 126 ಕಿ.ಮೀ ವೇಗದಲ್ಲಿ ಬರುತ್ತಿದ್ದ ಯಶವಂತಪುರ ಎಕ್ಸ್ಪ್ರೆಸ್ ರೈಲಿನ ಕೊನೆಯ ಎರಡು ಬೋಗಿಗಳ ಮೇಲೆ ಬಿದ್ದ ಪರಿಣಾಮ ಸಾವು ನೋವು ಹೆಚ್ಚಾಗಿದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬರೋಬ್ಬರಿ 1,700 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ!