Webdunia - Bharat's app for daily news and videos

Install App

ಅಮೇರಿಕಾದಿಂದ ವಾಟ್ಸ್‌ಅಪ್ ಮೂಲಕ ಭಾರತದಲ್ಲಿರುವ ಪತ್ನಿಗೆ ತಲಾಕ್

Webdunia
ಶುಕ್ರವಾರ, 3 ಮಾರ್ಚ್ 2017 (11:46 IST)
ಅಮೇರಿಕಾದಲ್ಲಿ ನೆಲಸಿರುವ ಭಾರತೀಯನೋರ್ವ ತನ್ನ ಪತ್ನಿಗೆ ವಾಟ್ಸ್‌ಅಪ್ ಮೂಲಕ ತಲಾಕ್ ನೀಡಿದ್ದಾನೆ.

ಹೀಗೆ ಪೋನ್ ಸಂದೇಶದ ಮೂಲಕ  ಪತ್ನಿಗೆ ತಲಾಕ್ ನೀಡಿರುವ ವ್ಯಕ್ತಿ  ಅಬ್ದುಲ್ ಅಖಿಲ್ (25) ಹೈದರಾಬಾದಿನ ಮೊಘಲ್‌ಪುರದ ನಿವಾಸಿಯಾಗಿದ್ದು 2015ರಲ್ಲಿ  ಮಲಕ್‌ಪೇಟ್‌ನ 20 ವರ್ಷದ ಮೆಹರಿನ್‌ನೂರ್‌ ಜತೆ ವಿವಾಹವಾಗಿದ್ದ. ಮದುವೆಯಾದ ಬಳಿಕ ಉದ್ಯೋಗದ ನಿಮಿತ್ತ ಅಮೇರಿಕಾಕ್ಕೆ ಮರಳಿದ ಆತ ಕಳೆದ ತಿಂಗಳು ಪತ್ನಿಗೆ ವಾಟ್ಸಪ್‌ ಮೂಲಕ ಪತ್ನಿಗೆ ತಲಾಕ್ ನೀಡಿದ್ದೇನೆ ಎಂದು ವಾದಿಸುತ್ತಿದ್ದಾನೆ , ಹೈದರಾಬಾದ್‌ನಲ್ಲಿ ತನ್ನ ತಂದೆ ತಾಯಿಯ ಮನೆಯಿಂದ ಹೊರಬಿದ್ದು ಹೋಗು ಎಂದು ಒತ್ತಡ ಹೇರುತ್ತಿದ್ದಾನೆ.
 
ಪತಿಯ ಸಂದೇಶ ಪಡೆದು ಆಘಾತಗೊಂಡಿರುವ ಪೀಡಿತೆಗೆ ಆಕೆಯ ಅತ್ತೆ-ಮಾವ, ನಾದಿನಿ ಸಹ ಮನೆ ಬಿಟ್ಟು ಹೋಗುವಂತೆ ಕಿರುಕುಳ ನೀಡುತ್ತಿದ್ದಾರಂತೆ. ಮತ್ತೀಗ ನ್ಯಾಯ ಕೋರಿ ಪೊಲೀಸ್ ಠಾಣೆ ಮೆಟ್ಟಿಲೇರಿರುವ ನೂರ್ ನನಗೆ ಪತಿ ತಲಾಕ್ ನೀಡಿಲ್ಲ. ಅಂತಹ ಯಾವ ಸಂದೇಶವೂ ನನಗೆ ಬಂದಿಲ್ಲ ಎನ್ನುತ್ತಿದ್ದಾಳೆ. 
 
ಮೊಘಲ್‌ಪುರ ಪೊಲೀಸರು ಕೇಸ್ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ.
 
ಅಬ್ದುಲ್ ಅಷ್ಟೇ ಅಲ್ಲ, ಆತನ ಸಹೋದರ ಸಯ್ಯದ್ ಫಯಾಜುದ್ದೀನ್ ಹುಸೇನ್ ಕೂಡ ತನ್ನ ಪತ್ನಿಗೆ ತಲಾಕ್ ನೀಡಲು ತಯಾರಾಗಿದ್ದು, ಡಿವೋರ್ಸ್ ನೋಟಿಸ್ ಕಳುಹಿಸಿದ್ದಾನೆ. ಆತನ ಪತ್ನಿ ಹಿನಾ ಫಾತಿಮಾ  ಕಳೆದೆರಡು ದಿನಗಳಿಂದ ಪತಿಯ ಮನೆ ಮುಂದೆ ಧರಣಿ ನಡೆಸುತ್ತಿದ್ದಾಳೆ.
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments