Webdunia - Bharat's app for daily news and videos

Install App

ತಾಜ್ ಮಹಲ್ ಮೇಲೆ ಡ್ರೋಣ್ ಹಾರಾಟ ನಡೆಸಿದ್ದ ಅಮೆರಿಕ ಪ್ರಜೆ ಬಂಧನ

Webdunia
ಶುಕ್ರವಾರ, 3 ಮಾರ್ಚ್ 2017 (11:15 IST)
ತೀವ್ರ ಭದ್ರತೆ ನಡುವೆಯೂ ತಾಜ್ ಮಹಲ್ ಮೇಲೆ ಡ್ರೋಣ್ ಹಾರಾಟ ನಡೆಸಿದ್ದ ಅಮೆರಿಕ ಪ್ರಜೆಯನ್ನ ಪೊಲೀಸರು ಬಂಧಿಸಿದ್ದಾರೆ. ವರದಿಗಳ ಪ್ರಕಾರ, ನಿನ್ನೆ ಮಧ್ಯಾಹ್ನ 2 ಗಂಟೆಗೆ ಈ ಘಟನೆ ನಡೆದಿದ್ದು, ಬಿಳಿ ಬಣ್ಣದ ಚಿಕ್ಕ ಡ್ರೋಣ್ ತಾಜ್ ಮಹಲ್ ಪ್ರದೇಶದ ಆಗಸದಲ್ಲಿ 2 ಬಾರಿ ಹಾರಾಟ ನಡೆಸಿದೆ.

 

ಕೂಡಲೇ ಪೊಲೀಸರು ಮತ್ತು ಸಿಐಎಸ್`ಎಫ್ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿದ್ದು, ಕೆಲ ಗಂಟೆಗಳ ಶೋಧದ ಬಳಿಯ ಹೋಟೆಲ್ ಒಂದರ ಮೇಲೆ ವ್ಯಕ್ತಿಯೊಬ್ಬ ಡ್ರೋಣ್ ಹಾರಾಟಕ್ಕೆ ಮತ್ತೊಂದು ಪ್ರಯತ್ನ ನಡೆಸುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಬಂಧಿತ ವ್ಯಕ್ತಿ ನಿಕೋಲಸ್ ಎಂಬಾತ ಅಮೆರಿಕದ ಒಹಿಯೋ ಮೂಲದ ಪ್ರವಾಸಿಗನಾಗಿದ್ದು, ಸ್ಥಳೀಯ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗಿದೆ. ಬಂಧಿತ ವ್ಯಕ್ತಿ ಕುರಿತಂತೆ ಯಾವುದೇ ಸಂಶಯಾಸ್ಪದ ಮಾಹಿತಿ ಸಿಕ್ಕಿಲ್ಲ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ನಿಷೇಧಿತ ಪ್ರದೇಶದಲ್ಲಿ ಡ್ರೋಣ್ ಹಾರಾಟ ನಡೆಸಿದ್ದ ಅಮೆರಿಕ ಪ್ರಜೆ ಕುರಿತ ಮಾಹಿತಿಯನ್ನ ಅಮೆರಿಕ ರಾಯಭಾರ ಕಚೇರಿಗೆ ನೀಡಲಾಗಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments