Select Your Language

Notifications

webdunia
webdunia
webdunia
webdunia

‘ಕ್ವಿಟ್ ಇಂಡಿಯಾ ಅಲ್ಲ, ಬಿಜೆಪಿ ಕ್ವಿಟ್ ಇಂಡಿಯಾ’

‘ಕ್ವಿಟ್ ಇಂಡಿಯಾ ಅಲ್ಲ, ಬಿಜೆಪಿ ಕ್ವಿಟ್ ಇಂಡಿಯಾ’
NewDelhi , ಗುರುವಾರ, 10 ಆಗಸ್ಟ್ 2017 (09:19 IST)
ನವದೆಹಲಿ: ಕ್ವಿಟ್ ಇಂಡಿಯಾ ಚಳವಳಿಯ 70 ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಸದುದ್ದೇಶಕ್ಕೆ ಬಳಕೆಯಾಗಬೇಕಿದ್ದ ವೇದಿಕೆ ರಾಜಕೀಯ ಕೆಸರೆರಚಾಟಕ್ಕೆ ವೇದಿಕೆಯಾಗಿದ್ದು ಮಾತ್ರ ವಿಪರ್ಯಾಸವಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಸಂಸತ್ತಿನಲ್ಲೇ ಪರೋಕ್ಷವಾಗಿ ಟಾಂಗ್ ಕೊಟ್ಟುಕೊಂಡಿದೆ.

 
ಮೊದಲು ಮಾತನಾಡಿದ ಪ್ರಧಾನಿ ಮೋದಿ ಕ್ವಿಟ್ ಇಂಡಿಯಾ ಚಳವಳಿಯ ಬಗ್ಗೆ ಮಾತನಾಡುವಾಗ ಮೊದಲ ಪ್ರಧಾನಿ ಜವಹರಲಾಲ್ ನೆಹರೂ ಕೈ ಬಿಟ್ಟಿದ್ದರು. ಆ ಬಳಿಕ ಮಾತನಾಡಿದ ಸೋನಿಯಾ ಗಾಂಧಿ ಕೆಲವು ಕೋಮುವಾದಿ ಸಂಘಟನೆಗಳು ಕ್ವಿಟ್ ಇಂಡಿಯಾ ಚಳವಳಿಯನ್ನು ವಿರೋಧಿಸಿತ್ತು ಎನ್ನುವ ಮೂಲಕ ಬಿಜೆಪಿ ಮತ್ತು ಆರ್ ಎಸ್ ಎಸ್ ಗೆ ಪರೋಕ್ಷವಾಗಿ ಟಾಂಗ್ ನೀಡಿದರು.

ಪ.ಬಂಗಾಲದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಇನ್ನು ಕ್ವಿಟ್ ಇಂಡಿಯಾ ಅಲ್ಲ, ಬಿಜೆಪಿ ಕ್ವಿಟ್ ಇಂಡಿಯಾ ಚಳವಳಿ ಪ್ರಾರಂಭವಾಗಲಿದೆ ಎನ್ನುವ ಮೂಲಕ ಬಿಜೆಪಿ ವಿರೋಧಿ ಘೋಷಣೆ ಮೊಳಗಿಸಿದರು. ಇತ್ತ ರಾಜ್ಯದಲ್ಲೂ ಸಿಎಂ ಸಿದ್ಧರಾಮಯ್ಯ ಕ್ವಿಟ್ ಇಂಡಿಯಾ ಚಳವಳಿಯ ಸ್ಮರಣಾರ್ಥ ನಡೆದ ಜಾಥಾ ಕಾರ್ಯಕ್ರಮದಲ್ಲಿ ರಾಜ್ಯದಿಂದಲೇ ಬಿಜೆಪಿ ಕ್ವಿಟ್ ಇಂಡಿಯಾ ಚಳವಳಿ ಪ್ರಾರಂಭವಾಗಲಿದೆ ಎಂದು ಹೂಂಕರಿಸಿದರು. ಈ ಮೂಲಕ ದೇಶಭಕ್ತಿಯನ್ನು ನೆನಪಿಸುವ ಕಾರ್ಯಕ್ರಮಕ್ಕೆ ರಾಜಕೀಯಕ್ಕೆ ಮೀಸಲಾಗಿದ್ದು ವಿಪರ್ಯಾಸ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಚೀನಾಗೆ ತಕ್ಕ ಎದಿರೇಟು ಕೊಟ್ಟ ಅರುಣ್ ಜೇಟ್ಲಿ