Select Your Language

Notifications

webdunia
webdunia
webdunia
webdunia

ಕೊಹಿನೂರ್ 'ಘರ್‌ವಾಪ್ಸಿ' ಗೆ ಕಾಂಗ್ರೆಸ್ ಆಗ್ರಹ

Congress
ಬ್ರಿಟಿಷ್ ಸರ್ಕಾರದ ಬಳಿ ಇರುವ ಭಾರತ ಮೂಲದ ಕೊಹಿನೂರ್ ವಜ್ರ ಹಿಂದಕ್ಕೆ ತರಬೇಕೆಂದು ದೇಶದಾದ್ಯಂತ ಬಹಳ ಒತ್ತಾಯ ಕೇಳಿಬರುತ್ತಿದೆ. ಇದೀಗ ಕಾಂಗ್ರೆಸ್ ಸಹ ಅಮೂಲ್ಯ ರತ್ನವನ್ನು ಹಿಂದಕ್ಕೆ ತರಬೇಕೆಂದು ಒತ್ತಾಯಿಸುತ್ತಿದೆ. 
 
ಭಾರತಕ್ಕೆ ಸೇರಿದ ಎಲ್ಲ ಪರಂಪರಾಗತ ವಸ್ತುಗಳನ್ನು ಮರಳಿ ತರಬೇಕು ಎಂದು ಕಾಂಗ್ರೆಸ್ ವಕ್ತಾರ ರಣ್ದೀಪ್ ಸುರ್ಜೇವಾಲಾ ಒತ್ತಾಯಿಸಿದ್ದಾರೆ. 
 
ತನ್ನ ಹಿಂದಿನ ನಿಲುವನ್ನು ಬದಲಿಸಿದ್ದ ಕೇಂದ್ರ ಸರ್ಕಾರ ಕೊಹಿನೂರ್ ವಜ್ರವನ್ನು ಮರಳಿ ತರಲು ಸೌಹಾರ್ದಯುತ ಪ್ರಯತ್ನವನ್ನು ನಡೆಸುತ್ತೇವೆ ಎಂದು ನಿನ್ನೆ ಹೇಳಿತ್ತು. 
 
ಬ್ರಿಟಿಷ್ ಈಸ್ಟ್ ಇಂಡಿಯಾ ಕೊಹಿನೂರ್ ವಜ್ರವನ್ನು ಕೊಂಡೊಯ್ದಿರಲಿಲ್ಲ. ಸಿಖ್ ಸಾರ್ವಭೌಮ ಮಹಾರಾಜ ರಣಜಿತ್ ಸಿಂಗ್ ಮಗ ಮಹಾರಾಜ ದುಲೀಪ್ ಸಿಂಗ್ ಇದನ್ನು ಬ್ರಿಟನ್‌ಗೆ ಉಡುಗೊರೆಯಾಗಿ ನೀಡಿದ್ದರು ಎಂದು ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್ ಸುಪ್ರೀಂಕೋರ್ಟ್ ಸುಪ್ರೀಂಕೋರ್ಟ್‌ನಲ್ಲಿ ಹೇಳಿಕೆ ನೀಡಿದ ಒಂದು ದಿನದ ಬಳಿಕ ಸರ್ಕಾರ ಈ ರೀತಿಯಾಗಿ ಪ್ರತಿಕ್ರಿಯಿಸಿದೆ. 
 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada