Webdunia - Bharat's app for daily news and videos

Install App

ಕುಂದ್ರಾ ವಿರುದ್ಧ ಈಗ ಮತ್ತೊಂದು ಗಂಭೀರ ಆರೋಪ

Webdunia
ಶನಿವಾರ, 31 ಜುಲೈ 2021 (10:22 IST)
ಮುಂಬೈ (ಜು.31): ಅಶ್ಲೀಲ ಚಿತ್ರಗಳ ನಿರ್ಮಾಣ ಪ್ರಕರಣದಲ್ಲಿ ಜೈಲು ಸೇರಿರುವ ಬಾಲಿವುಡ್ ನಟಿ ಶಿಲ್ಪಾಶೆಟ್ಟಿಪತಿ ರಾಜ್ ಕುಂದ್ರಾ ವಿರುದ್ಧ ಈಗ 3000 ಕೋಟಿ ರು.ಗಳ ವಂಚನೆ ಆರೋಪ ಕೇಳಿಬಂದಿದೆ.

•ಅಶ್ಲೀಲ ಚಿತ್ರಗಳ ನಿರ್ಮಾಣ ಪ್ರಕರಣದಲ್ಲಿ ಜೈಲು ಸೇರಿರುವ ಬಾಲಿವುಡ್ ನಟಿ ಶಿಲ್ಪಾಶೆಟ್ಟಿಪತಿ ರಾಜ್ ಕುಂದ್ರಾ
•ಕುಂದ್ರಾ ವಿರುದ್ಧ ಈಗ 3000 ಕೋಟಿ ರು.ಗಳ ವಂಚನೆ ಆರೋಪ
•ಒಂದರ ಮೇಲೋಂದು ಆರೋಪ ಎದುರಿಸುತ್ತಿರುವ ರಾಜ್ ಕುಂದ್ರಾ
ಮಹಾರಾಷ್ಟ್ರದ ಬಿಜೆಪಿ ಶಾಸಕ ರಾಮ್ ಕದಂ ಈ ಆರೋಪ ಮಾಡಿದ್ದು, ರಾಜ್ ಕುಂದ್ರಾ ಅವರ ಒಡೆತನದ ವಿಯಾನ್ ಇಂಡಸ್ಟ್ರೀಸ್ ಕಂಪನಿಯು ‘ಗೇಮ್ ಆಫ್ ಡಾಟ್’ ಎಂಬ ಆನ್ಲೈನ್ ಗೇಮ್ ಬಿಡುಗಡೆ ಮಾಡಿತ್ತು. ದೇಶಾದ್ಯಂತ ಅದರ ವಿತರಣೆಯ ಹಕ್ಕುಗಳನ್ನು ನೀಡುವುದಾಗಿ ಅನೇಕ ಡಿಸ್ಟ್ರಿಬ್ಯೂಟರ್ಗಳಿಂದ ಹಣ ಸಂಗ್ರಹಿಸಿ, ನಂತರ ವಂಚನೆ ಎಸಗಿದೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಇನ್ನು, ರಾಜ್ ಕುಂದ್ರಾ ವಿರುದ್ಧ ನಟಿ ಹಾಗೂ ಮಾಡೆಲ್ ಒಬ್ಬರು ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಪೊಲೀಸರಿಗೆ ದೈಹಿಕ ಕಿರುಕುಳದ ದೂರು ನೀಡಿದ್ದರು. ಆದರೆ ನಂತರ ಆಕೆಯ ಮೇಲೆ ಮತ್ತು ಪೊಲೀಸರ ಮೇಲೆ ಒತ್ತಡ ತಂದು ಆ ದೂರಿನ ತನಿಖೆಯಾಗದಂತೆ ನೋಡಿಕೊಳ್ಳಲಾಗಿದೆ ಎಂದೂ ಆರೋಪಿಸಿದ್ದಾರೆ.
ಎರಡು ದಿನದ ಹಿಂದಷ್ಟೇ ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾ ಅವರು ಕುಂದ್ರಾ ತಮಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದರು. ಈಗ ರಾಮ್ ಕದಂ ಹೇಳುತ್ತಿರುವ ನಟಿಯೂ ಆಕೆಯೇ ಆಗಿರಬಹುದೇ ಎಂಬ ಅನುಮಾನ ವ್ಯಕ್ತವಾಗಿದೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ