Webdunia - Bharat's app for daily news and videos

Install App

ಡಾಕ್ಯುಮೆಂಟ್ ಅಧ್ಯಯನ ಮಾಡಲು ಸಂಪುಟಕ್ಕೆ ಸೂಚನೆ

Webdunia
ಸೋಮವಾರ, 30 ಆಗಸ್ಟ್ 2021 (09:51 IST)
ನವದೆಹಲಿ: ಆಡಳಿತಾತ್ಮಕ ಸುಧಾರಣೆಗಳಿಗೆ ಚುರುಕು ಮುಟ್ಟಿಸಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದು 2019 ರ ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಬಿಡುಗಡೆ ಮಾಡಿದ್ದ ವಿಷನ್ ಡಾಕ್ಯುಮೆಂಟ್ (ದೂರದೃಷ್ಟಿ ಯೋಜನೆಗಳ ನೀಲನಕ್ಷೆ) ಯ ಅಂಶಗಳನ್ನು ತ್ವರಿತವಾಗಿ ಜಾರಿಗೊಳಿಸಲು ಸಚಿವ ಸಂಪುಟ ಸಹೋದ್ಯೋಗಿಗಳಿಗೆ ನೀಡಿದ್ದಾರೆ.

2014, 2019 ರ ವಿಷನ್ ಡಾಕ್ಯುಮೆಂಟ್ ನ್ನು ಅಧ್ಯಯನ ಮಾಡವಂತೆ ಹೊಸ ಸಚಿವ ಸಂಪುಟ ಸಹೋದ್ಯೋಗಿಗಳಿಗೆ ಪ್ರಧಾನಿ ಮೋದಿ ಸೂಚನೆ ನೀಡಿದ್ದು ತಮ್ಮ ಇಲಾಖೆಗಳ ವ್ಯಾಪ್ತಿಯಲ್ಲಿ ಅವುಗಳನ್ನು ತ್ವರಿತವಾಗಿ ಜಾರಿಗೊಳಿಸುವಂತೆ ಮೋದಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಸಚಿವ ಸಂಪುಟ ಪುನಾರಚನೆಯಾದ ಬಳಿಕ ನಡೆದ 2 ಸಚಿವ ಸಂಪುಟ ಸಭೆಗಳಲ್ಲಿ ಪ್ರಧಾನಿ 2019 ರ ವಿಷನ್ ಡಾಕ್ಯುಮೆಂಟ್ ನ ಅಂಶಗಳನ್ನು ಜಾರಿಗೊಳಿಸುವತ್ತ ಗಮನ ಕೇಂದ್ರೀಕರಿಸಲು ಮೋದಿ ಹೇಳಿದ್ದಾರೆ. ಪಕ್ಷದ ಆಂತರಿಕವಾಗಿ ಬಿಜೆಪಿ ನಾಯಕರು ಮೂರು ಪ್ರಮುಖ, ದೊಡ್ಡ ಕ್ಷೇತ್ರಗಳಾದ ಆಡಳಿತ, ಪೊಲೀಸ್, ನ್ಯಾಯಾಂಗ ಸುಧಾರಣೆಗಳತ್ತ ಗಮನ ಹರಿಸುತ್ತಿದ್ದಾರೆ.
2019 ರ ವಿಷನ್ ಡಾಕ್ಯುಮೆಂಟ್ ನಲ್ಲಿ ಕಡಿಮೆ ಸರ್ಕಾರ, ಗರಿಷ್ಠ ಆಡಳಿತದ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ನಾಗರಿಕ ಸೇವೆಗಳಲ್ಲಿನ ಸುಧಾರಣೆ ಹಾಗೂ ಪೂರಕ ಇಲಾಖೆಗಳ ವಿಲೀನದ ಭರವಸೆ ನೀಡಿತ್ತು.
ರಾಜ್ಯಗಳೊಂದಿಗೆ ಸಮಾಲೋಚನೆ ಬಳಿಕ, ಮಾದರಿ ಪೊಲೀಸ್ ಕಾಯ್ದೆಯನ್ನು ಜಾರಿಗೊಳಿಸುವ ಬಗ್ಗೆಯೂ ವಿಷನ್ ಡಾಕ್ಯುಮೆಂಟ್ ಭರವಸೆ ನೀಡಿತ್ತು. ಕೋವಿಡ್-19 ಎರಡನೇ ಅಲೆಯ ನಂತರ ಎದುರಾದ ರಾಜಕೀಯ ಸವಾಲುಗಳನ್ನು ಎದುರಿಸಲು ಪ್ರಧಾನಿ ಮೋದಿ ಆಡಳಿತಾತ್ಮಕ ಸುಧಾರಣೆಗಳತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಆರ್ಟಿಕಲ್ 370 ರದ್ದತಿ, ಸಿಎಎ ಜಾರಿಗಳಂತಹ ರಾಷ್ಟ್ರೀಯವಾದಿ ವಿಚಾರಗಳಿಗೆ ಸಂಬಂಧಿಸಿದ ಭರವಸೆಗಳನ್ನು ಮೋದಿ ಸರ್ಕಾರ ಈಡೇರಿಸಿದ್ದರೂ, ದೇಶಾದ್ಯಂತ ಒಂದೇ ಬಾರಿ ಚುನಾವಣೆ ನಡೆಸುವುದು, ಚುನಾವಣೆಗಳ ಸಂದರ್ಭಗಳಲ್ಲಿ ದೇಶಾದ್ಯಂತ ಮತದಾರರ ಒಂದೇ ಪಟ್ಟಿ, 2023 ವೇಳೆಗೆ ರೈತರ ಆದಾಯವನ್ನು ಹೆಚ್ಚುಗೊಳಿಸುವುದು ಸೇರಿದಂತೆ ಇನ್ನೂ ಹಲವು ಭರವಸೆಗಳನ್ನು ಮೋದಿ ಸರ್ಕಾರ ಈಡೇರಿಸಬೇಕಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಧರ್ಮಸ್ಥಳ: 15 ಶವ ಹೂತಿಟ್ಟ ಸ್ಥಳವನ್ನು ಗುರುತಿಸಿದ ದೂರುದಾರ, ಪ್ರದೇಶಕ್ಕೆ ಗನ್‌ಮ್ಯಾನ್ ಭದ್ರತೆ

ನಾಳೆ ನಾಗರಪಂಚಮಿ: ನಾಗದೋಷಗಳಿಗೆ ಈ ದಿನ ವಿಶೇಷ ಪೂಜೆ ನೆರವೇರಿಸಿದ್ರೆ ದೂರವಾಗುತ್ತೆ ಸಂಕಷ್ಟ

ಕಾಲ್ತುಳಿತ ಪ್ರಕರಣ: 52 ದಿನಗಳ ಬಳಿಕ ಬಿ ದಯಾನಂದ್ ಸೇರಿ ನಾಲ್ವರು ಪೊಲೀಸ್ ಅಧಿಕಾರಿ ಅಮಾನತು ಹಿಂಪಡೆದ ಸರ್ಕಾರ

ಯೂರಿಯಾ ಕೊರತೆ ವಿಚಾರದಲ್ಲಿ ಬಿಜೆಪಿಗೆ ಸವಾಲೆಸೆದ ಕೃಷಿ ಸಚಿವ ಚಲುವರಾಯಸ್ವಾಮಿ

ಬ್ಯಾಂಕಾಕ್‌ನ ಮಾರುಕಟ್ಟೆಯಲ್ಲಿ ಗುಂಡಿನ ದಾಳಿ: ದಾಳಿಕೋರ ಸೇರಿ 6 ಮಂದಿ ಸಾವು

ಮುಂದಿನ ಸುದ್ದಿ
Show comments