Select Your Language

Notifications

webdunia
webdunia
webdunia
webdunia

125 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಎಲ್ಲರಿಗೂ ಉದ್ಯೋಗ ನೀಡಲು ಸಾಧ್ಯವಿಲ್ಲ: ಅಮಿತ್ ಶಾ ನವದೆಹಲಿ

125 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಎಲ್ಲರಿಗೂ ಉದ್ಯೋಗ ನೀಡಲು ಸಾಧ್ಯವಿಲ್ಲ: ಅಮಿತ್ ಶಾ ನವದೆಹಲಿ
ನವದೆಹಲಿ , ಶನಿವಾರ, 27 ಮೇ 2017 (12:54 IST)
ಪ್ರಧಾನಮಂತ್ರಿ ನೇತೃತ್ವದ ಕೇಂದ್ರ ಸರ್ಕಾರ ನಿರ್ಣಾಯಕ ಮಯತ್ತು ಪಾರದರ್ಶಕವಾಗಿದೆ. 3 ವರ್ಷದ ಆಡಳಿತದಲ್ಲಿ ಯಾವುದೇ ಭ್ರಷ್ಟಾಚಾರ ಆರೋಪ ನಮ್ಮ ಸರ್ಕಾರದ ಮೇಲಿಲ್ಲ. ಜಾತಿವಾದ, ಕೌಟುಂಬಿಕ ಆಡಳಿತ ಅಂತ್ಯಗೊಂಡಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
 

ಮೋದಿ ಸರ್ಕಾರಕ್ಕೆ ಮೂರನೇ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, 70 ವರ್ಷಗಳಲ್ಲಿ ಮಾಡಲಾಗದ ಬದಲಾವಣೆಯನ್ನ 3 ವರ್ಷಗಳಲ್ಲಿ ಮಾಡಲಾಗಿದೆ. ನಿರುದ್ಯೋಗ ತೊಡೆದುಹಾಕುವ ನಿಟ್ಟಿನಲ್ಲಿ ಸ್ವಯಂ ಉದ್ಯೋಗ ಸೇರಿದಂತೆ ಬೇರೆ ದೃಷ್ಟಿಕೋನದಲ್ಲಿ ಯೋಚಿಸುತ್ತಿದ್ದೇವೆ. 8 ಕೋಟಿ ಜನರನ್ನ ಸ್ವಯಂ ಉದ್ಯೋಗಿಗಳಾಗಿ ಮಾಡಲಾಗಿದೆ. 125 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಎಲ್ಲರಿಗೂ ಉದ್ಯೋಗ ಕೊಡುವುದು ಸಾಧ್ಯವಿಲ್ಲ ಎಂದಿದ್ದಾರೆ.

ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರತೀ ವರ್ಷ 2 ಕೋಟಿ ಜನರಿಗೆ ಉದ್ಯೋಗ ನೀಡುವ ಭರವಸೆ ನೀಡಿತ್ತು. ಆದರೆ, 2015 ಮತ್ತು 2016ರಲ್ಲಿ ತಲಾ 1.35 ಕೋಟಿ ಜನರಿಗೆ ಮಾತ್ರ ಉದ್ಯೋಗ ಒದಗಿಸಲಾಗಿದೆ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಆರೋಪಿಸಿದ್ದರು. ಈ ಆರೋಪಕ್ಕೆ ಪ್ರತಿಯಾಗಿ ಅಮಿತ್ ಶಾ ಉತ್ತರಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



Share this Story:

Follow Webdunia kannada

ಮುಂದಿನ ಸುದ್ದಿ

ಹಿಜ್ಬುಲ್ ನೂತನ ಕಮಾಂಡರ್ ಸಬ್ಜಾರ್ ಬಟ್ ಸೇರಿ 8 ಉಗ್ರರ ಹತ್ಯೆ