Select Your Language

Notifications

webdunia
webdunia
webdunia
webdunia

ಜೈಲಿನಲ್ಲಿ ಶಶಿಕಲಾ ಫ್ರೀಬರ್ಡ್.. ಆರ್`ಟಿಐ ಬಯಲು ಮಾಡಿದೆ ಮತ್ತೊಂದು ಸತ್ಯ..?

ಜೈಲಿನಲ್ಲಿ ಶಶಿಕಲಾ ಫ್ರೀಬರ್ಡ್.. ಆರ್`ಟಿಐ ಬಯಲು ಮಾಡಿದೆ ಮತ್ತೊಂದು ಸತ್ಯ..?
ಬೆಂಗಳೂರು , ಬುಧವಾರ, 13 ಸೆಪ್ಟಂಬರ್ 2017 (11:25 IST)
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಸೇರಿರುವ ಜಯಲಲಿತಾ ಆಪ್ತೆ ಶಶಿಕಲಾಗೆ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆಯಾ..? ಹೌದು ಎನ್ನುವಂತಿದೆ ಮಾಧ್ಯಮಗಳು ಬಿಡುಗಡೆ ಮಾಡಿರುವ ಆರ್`ಟಿಐ ಮಾಹಿತಿ.

ಶಶಿಕಲಾ ಜೈಲು ಸೇರಿ 6-7 ತಿಂಗಳು ಕಳೆದಿದ್ದು, ಇದುವರೆಗೂ ಶಶಿಲಾಗೆ ಯಾವುದೇ ಕೆಲಸ ನೀಡಿಲ್ಲ. ಜೈಲಿನ ನಿಯಮದ ಪ್ರಕಾರ ಜೈಲು ಶಿಕ್ಷೆಗೀಡಾದ ಕೈದಿಗೆ ಜೈಲಿನಲ್ಲಿರುವ ಕೆಲಸಗಳ ಪೈಕಿ ಯಾವುದಾದರೊಂದು ಕೆಲಸ ನೀಡಬೇಕು. ಆದರೆ, ಜೈಲಿನಲ್ಲಿ ಈ ಬಗ್ಗೆ ಯಾವುದೇ ನಿಯಮ ಪಾಲನೆ ಮಾಡಲಾಗಿಲ್ಲ ಎಂಬುದು ವರದಿಗಳಲ್ಲಿ ಸ್ಪಷ್ಟವಾಗಿದೆ. ಜೊತೆಗೆ ಫೆಬ್ರವರಿಯಿಂದ ಏಪ್ರಿಲ್ ತಿಂಗಳಿನಲ್ಲೇ 24 ಮಂದಿ ಶಶಿಕಲಾ ಅವರನ್ನ ಭೇಟಿಯಾಗಿರುವುದು ಆರ್`ಟಿಐ ಮಾಹಿತಿಯಲ್ಲಿ ಬೆಳಕಿಗೆ ಬಂದಿದೆ.    

ಈ ಹಿಂದೆ ಜೈಲಿನಲ್ಲಿ ಶಶಿಕಲಾ ಅವರಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂದು ಅಂದಿನ ಕಾರಾಗೃಹದ ಡಿಐಜಿ ಡಿ. ರೂಪಾ ನೀಡಿದ್ದ ವರದಿ ಭಾರೀ ಕೋಲಾಹಲಕ್ಕೆ ಕಾರಣವಾಗಿತ್ತು. ಶಶಿಕಲಾಗೆ ವಿಶೇಷ ಕಿಚನ್, ಸಿಬ್ಬಂದಿ ನೇಮಕ ಸೇರಿದಂತೆ ಹಲವು ವಿಷಯಗಳನ್ನೊಳಗೊಂಡಂತೆ ಉನ್ನತಾಧಿಕಾರಿಗೆ ವರದಿ ನೀಡಿದ್ದರು. ಈ ಪ್ರಕರಣ ತನಿಖೆ ನಡೆಯುತ್ತಿರುವ ಬೆನ್ನಲ್ಲೇ ಜೈಲಿನ ಮತ್ತೊಂದು ನಿಯಮ ಉಲ್ಲಂಘನೆ ಬಯಲಾದಂತಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬ್ರಿಟನ್ನಿನಲ್ಲಿ ದಾವೂದ್ ಇಬ್ರಾಹಿಂ ಆಸ್ತಿ ಮುಟ್ಟುಗೋಲು