Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿ ಕನಸು ನನಸಾಗಿಸಲು ಹೊರಟ ಜಿಲ್ಲಾಧಿಕಾರಿ: ಮಾಡಿದ್ದೇನು ಗೊತ್ತಾ?

ಪ್ರಧಾನಿ ಮೋದಿ ಕನಸು ನನಸಾಗಿಸಲು ಹೊರಟ ಜಿಲ್ಲಾಧಿಕಾರಿ: ಮಾಡಿದ್ದೇನು ಗೊತ್ತಾ?
ಶಾಡೋಲ್ (ಮಧ್ಯಪ್ರದೇಶ) , ಶನಿವಾರ, 8 ಅಕ್ಟೋಬರ್ 2016 (15:01 IST)
ಪ್ರಧಾನಿ ಮೋದಿಯವರ ಸ್ವಚ್ಚ ಭಾರತ ಕನಸನ್ನು ಜಿಲ್ಲಾಧಿಕಾರಿ ಮುಕೇಶ್ ಕುಮಾರ್ ಶುಕ್ಲಾ ನನಸಾಗಿಸಲು ಹೊರಟಿದ್ದಾರೆ. ಮನೆಯಲ್ಲಿ ಶೌಚಾಲಯವಿರದ ಸರಕಾರಿ ನೌಕರರಿಗೆ ಮುಂದಿನ ತಿಂಗಳಿನಿಂದ ವೇತನ ನೀಡಲು ಸಾಧ್ಯವಿಲ್ಲ ಎನ್ನುವ ಫರ್ಮಾನ್ ಹೊರಡಿಸಿದ್ದಾರೆ.
 
ಸರಕಾರಿ ಉದ್ಯೋಗಿಗಳು ತಮ್ಮ ತಮ್ಮ ಮನೆಯಲ್ಲಿ ಕಡ್ಡಾಯವಾಗಿ ಶೌಚಾಲಯ ಹೊಂದಿರಬೇಕು. ಶೌಚಾಲಯ ಹೊಂದಿರದವರಿಗೆ ವೇತನವಿಲ್ಲ ಎಂದು ಕಡ್ಡಾಯ ಆದೇಶ ಹೊರಡಿಸಿದ್ದಾರೆ.
 
ಸರಕಾರದಿಂದ ವೇತನ ಪಡೆಯುವ ಪ್ರತಿಯೊಬ್ಬರು ಮುಂದಿನ ತಿಂಗಳು ವೇತನ ಪಡೆಯುವ ಸಂದರ್ಭದಲ್ಲಿ ಮನೆಯಲ್ಲಿ ಶೌಚಾಲಯವಿದೆ ಎನ್ನುವ ಪ್ರಮಾಣ ಪತ್ರ ಹೊಂದುವುದು ಕಡ್ಡಾಯ. ಆಯಾ ಇಲಾಖೆಗಳ ಮುಖ್ಯಸ್ಥರು ತಮ್ಮ ನೌಕರರ ಮನೆಗಳಿಗೆ ತೆರಳಿ ಶೌಚಾಲಯವಿದೆ ಎನ್ನುವುದನ್ನು ಪರಿಶೀಲನೆ ನಡೆಸಿ ಪ್ರಮಾಣ ಪತ್ರ ನೀಡುತ್ತಾರೆ ಎಂದು ತಿಳಿಸಿದ್ದಾರೆ. 
 
ಜಿಲ್ಲಾಡಳಿತದ ಅಧಿಕಾರಿಗಳ ಪ್ರಕಾರ, ನಗರವನ್ನು ಶುಚಿಯಾಗಿಡಲು ಸರ್ವಪ್ರಯತ್ನಗಳನ್ನು ಮಾಡಲಾಗುತ್ತಿದ್ದು, ಜನರಲ್ಲಿ ಜಾಗೃತೆ ಮೂಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಸ್ಟೀಲ್ ಬ್ರಿಡ್ಜ್ ನಿರ್ಮಾಣ ಪರಿಸರಕ್ಕೆ ಮಾರಕವಲ್ಲ: ಸಿಎಂ