Select Your Language

Notifications

webdunia
webdunia
webdunia
webdunia

ಶಶಿಕಲಾಗೆ ಎಸಿ ಇಲ್ಲ, ಚೆನ್ನೈಗೆ ಶಿಫ್ಟ್ ಆಗಲ್ಲ: ಡಿಐಜಿ ಸ್ಪಷ್ಟನೆ

ಶಶಿಕಲಾಗೆ ಎಸಿ ಇಲ್ಲ, ಚೆನ್ನೈಗೆ ಶಿಫ್ಟ್ ಆಗಲ್ಲ: ಡಿಐಜಿ ಸ್ಪಷ್ಟನೆ
Bangalore , ಗುರುವಾರ, 2 ಮಾರ್ಚ್ 2017 (09:11 IST)
ಬೆಂಗಳೂರು: ಆದಾಯ ಮೀರಿ ಆಸ್ಥಿ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧಿಯಾಗಿರುವ ಎಐಎಡಿಎಂಕೆ ಮುಖ್ಯಸ್ಥೆ ಶಶಿಕಲಾ ನಟರಾಜನ್ ಗೆ ವಿಶೇಷ ಸೌಲಭ್ಯಗಳಿಲ್ಲ ಎಂದು ಬಂಧೀಖಾನೆ ಡಿಐಜಿ ಸ್ಪಷ್ಟಪಡಿಸಿದ್ದಾರೆ.


ಚೆನ್ನೈ ಮೂಲದ ವಕೀಲರೊಬ್ಬರು ಮಾಹಿತ ಹಕ್ಕು ಖಾಯಿದೆಯ ಅನ್ವಯ ಸಲ್ಲಿಸಿದ್ದ ಅರ್ಜಿಯಲ್ಲಿ ಶಶಿಕಲಾಗೆ ನೀಡಲಾಗುತ್ತಿರುವ ಸವಲತ್ತುಗಳ ಬಗ್ಗೆ ವಿವರಣೆ ಕೇಳಿದ್ದರು. ಇದಕ್ಕೆ ಉತ್ತರಿಸಿರುವ ಜೈಲು ಅಧೀಕ್ಷಕರು ಶಶಿಕಲಾರನ್ನು ಸಾಮಾನ್ಯ ಖೈದಿಯಂತೇ ನೋಡಲಾಗುತ್ತಿದೆ.

ವಿಶೇಷ ಕೊಠಡಿ, ಹಾಸಿಗೆ, ಬಾತ್ ರೂಂ, ಎ.ಸಿ. ವ್ಯವಸ್ಥೆ ಯಾವುದೂ ನೀಡಿಲ್ಲ. ಒಂದು ಟಿವಿ ವೀಕ್ಷಣೆಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇದುವರೆಗಾಗಿ ಶಶಿಕಲಾ ಸಂಬಂಧಿ ಟಿಟಿ ದಿನಕರನ್ ಮಾತ್ರ ಭೇಟಿಯಾಗಿ 30 ರಿಂದ 40 ನಿಮಿಷಗಳ ಕಾಲ ಮಾತುಕತೆಗೆ ಅವಕಾಶ ನೀಡಲಾಗಿದೆ. ಅಲ್ಲದೆ, ಚೆನ್ನೈ ಜೈಲಿಗೆ ವರ್ಗಾವಣೆ ಮಾಡುವ ಬಗ್ಗೆ ತಮಗೆ ಯಾವುದೇ ಮನವಿ ಬಂದಿಲ್ಲ ಎಂದು ಡಿಐಜಿ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಹಳೇ ನೋಟು ಇಟ್ಟುಕೊಂಡಿದ್ದರೆ ಜೋಕೆ!