Publish Date: Tue, 15 Nov 2022 (12:30 IST)
Updated Date: Tue, 15 Nov 2022 (11:31 IST)
ನವದೆಹಲಿ : ನ್ಯಾಷನಲ್ ಹೆರಾಲ್ಡ್ ಕೇಸ್ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಇಂದು ಜಾರಿ ನಿರ್ದೇಶನಾಲಯ ವಿಚಾರಣೆ ಎದುರಿಸಿದ್ದಾರೆ.
ಮೂರು ಗಂಟೆಗಳ ಕಾಲ ವಿಚಾರಣೆ ಎದುರಿಸಿದ ಡಿಕೆ ಶಿವಕುಮಾರ್ ಕೆಲವೊಂದು ದಾಖಲೆ ಸಲ್ಲಿಸಲು ಮೂರು ದಿನ ಕಾಲಾವಕಾಶ ಪಡೆದಿದ್ದಾರೆ.
ವಿಚಾರಣೆಗೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ನನ್ನ ಜೊತೆ ವ್ಯವಹರಿಸುತ್ತಿದ್ದವರನ್ನು ಇಡಿ ಅಧಿಕಾರಿಗಳು ವಿಚಾರಣೆ ಮಾಡುತ್ತಿದ್ದಾರೆ.
ಇದರಿಂದ ನನ್ನ ಜೊತೆ ಬಿಸಿನೆಸ್ ಮಾಡಲು ಯಾರೂ ಕೂಡ ಮುಂದೆ ಬರುತ್ತಿಲ್ಲ. ನನ್ನ ಪೋನ್ ರಿಸೀವ್ ಮಾಡಲು ಸಹ ಭಯಪಡುತ್ತಿದ್ದಾರೆ. ನನಗೆ ಸಾಲು ಸಾಲು ವಿಚಾರಣೆಗಳಿದ್ದು, ನಮ್ಮ ಗೋಳು ಮತ್ತು ಕಷ್ಟ ನಿಮ್ಮ ಬಳಿ ಹೇಳಿಕೊಂಡರೆ ಏನು ಪ್ರಯೋಜನವಿಲ್ಲ ಎಂದಿದ್ದಾರೆ.