ಶಿವಸೇನೆ ಭಾನುವಾರ 50ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು ಸಮಾರಂಭಕ್ಕೆ ತನ್ನ ಮಿತ್ರ ಪಕ್ಷ ಬಿಜೆಪಿಗೆ ಆಹ್ವಾನವಿತ್ತಿಲ್ಲ. ಈ ಮೂಲಕ ಎರಡು ಪಕ್ಷಗಳ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬುದು ಮತ್ತಷ್ಟು ಸ್ಪಷ್ಟಗೊಂಡಿದೆ.
ನಾವು ಕಾರ್ಯಕ್ರಮಕ್ಕೆ ಬಿಜೆಪಿಗೆ ಆಹ್ವಾನವಿತ್ತಿಲ್ಲ. ವಾಸ್ತವವೆಂದರೆ ನಾವು ಯಾವ ಪಕ್ಷಕ್ಕೂ ಆಮಂತ್ರಣವನ್ನು ನೀಡಿಲ್ಲ. ಇದು ಆಂತರಿಕ ವಿಚಾರ ಎಂದು ಮಹಾರಾಷ್ಟ್ರ ಕೈಗಾರಿಕಾ ಸಚಿವ, ಶಿವಸೇನಾ ಹಿರಿಯ ನಾಯಕ ಸುಭಾಷ್ ದೇಸಾಯಿ ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಮುಂಬೈ ಬಿಜೆಪಿ ಮುಖ್ಯಸ್ಥ ಆಶಿಶ್ ಶೆಲಾರ್, ಅವರಿಗೆ ಒಳಿತಾಗಲಿ ಎಂದು ಹಾರೈಸುತ್ತೇವೆ. ಕರೆಯಲೇ ಬೇಕೆಂಬುದು ಕಡ್ಡಾಯವಲ್ಲ. ಇದು ಅವರ ಆಯ್ಕೆ ಎಂದಿದ್ದಾರೆ.
ಈ ಬೆಳವಣಿಗೆ ಎರಡು ಪಕ್ಷಗಳು ಮುಂಬೈ ಸ್ಥಳೀಯ ಚುನಾವಣೆಗಳಲ್ಲಿ ಪ್ರತ್ಯೇಕವಾಗಿ ಕಣಕ್ಕಿಳಿಯಲಿವೆ ಎಂಬ ಊಹಾಪೋಹಗಳಿಗೆ ಇಂಬು ನೀಡಿದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.