Select Your Language

Notifications

webdunia
webdunia
webdunia
webdunia

ಸರ್ದಾರ್ಜಿ ಜೋಕ್ ಮಾಡಲು ಇನ್ನು ನೋ ಪ್ರಾಬ್ಲಂ!

ಸರ್ದಾರ್ಜಿ ಜೋಕ್ ಮಾಡಲು ಇನ್ನು ನೋ ಪ್ರಾಬ್ಲಂ!
NewDelhi , ಬುಧವಾರ, 8 ಫೆಬ್ರವರಿ 2017 (10:41 IST)
ನವದೆಹಲಿ: ನಮ್ಮಲ್ಲಿ ಸರ್ದಾರ್ಜಿ ಜೋಕ್ ಗಳು ಬಹಳ ಜನಪ್ರಿಯ. ಸಿನಿಮಾಗಳಲ್ಲೂ ಸಿಖ್ ಸಮುದಾಯದವರನ್ನು ತಮಾಷೆಯಾಗಿ ಬಿಂಬಿಸಲಾಗುತ್ತಿದೆ. ಇದನ್ನೆಲ್ಲಾ ನಿಲ್ಲಿಸಿ ಎಂದು ಸಿಖ್ ಸಮುದಾಯದವರು ಮಾಡಿದ ಮನವಿಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

 
ಸಿಖ್ ಸಮುದಾಯದವರನ್ನು ಲೇವಡಿ ಮಾಡುವಂತಹ ಜೋಕ್ ಗಳನ್ನು ನಿಷೇಧಿಸಬೇಕು ಎಂದು ಅಮೃತಸರದ ಶಿರೋಮಣಿ ಗುರುದ್ವಾರಾ ಪ್ರಬಂಧಕ ಸಮಿತಿ ಹಾಗೂ ಕೆಲವು ಸಿಖ್ ಸಂಘಟನೆಗಳು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದವು.

ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಇಂತಹ ಜೋಕ್ಸ್ ಗಳಿಗೆ ನಿಷೇಧ ಹೇರಲು ಸಾಧ್ಯವಿಲ್ಲ. ಅಂತಹ ನಿಷೇಧ ಜಾರಿ ಮಾಡಿ ನೈತಿಕ ಮಾರ್ಗದರ್ಶನ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ನಿಷೇಧಿಸಿದರೂ ಅದನ್ನು ಜಾರಿ ಮಾಡುವವರು ಯಾರು? ಇಂತಹ ಪ್ರಕರಣಗಳ ವಿರುದ್ಧ ಹೋರಾಡಿ ಗೌರವ ಕಳೆದುಕೊಳ್ಳಬೇಡಿ ಎಂದು ತಾಕೀತು ಮಾಡಿದೆ. ಅಲ್ಲಿಗೆ ಇನ್ನು ಮುಂದೆ ಸರ್ದಾರ್ಜಿ ಜೋಕ್ ಗಳನ್ನು ನಿರಾಯಾಸವಾಗಿ ಹೇಳಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಿವಿಧ ಬೇಡಿಕೆ ಈಡೇರಿಸುವಂತೆ ಸಿಎಂ ಸಿದ್ದರಾಮಯ್ಯಗೆ ಜಿ.ಪಂ ಅಧ್ಯಕ್ಷರ ಮನವಿ!