ಲಕ್ನೋ : ಈಗಾಗಲೇ ಮದರಸಾಗಳಲ್ಲಿ ರಾಷ್ಟ್ರಗೀತೆಗಳನ್ನು ಕಡ್ಡಾಯಗೊಳಿಸಿರುವ ಉತ್ತರಪ್ರದೇಶ ಸರ್ಕಾರವು ಮತ್ತೊಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.
ಹೊಸ ಮದರಸಾಗಳಿಗೆ ಯಾವುದೇ ಅನುದಾನವನ್ನು ನೀಡಲ್ಲ ಎಂದು ಉತ್ತರ ಪ್ರದೇಶದ ಕ್ಯಾಬಿನೆಟ್ನಲ್ಲಿ ಬಿಲ್ ಪಾಸ್ ಆಗಿದೆ. ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸಂಪುಟವು ಹೊಸ ಮದರಸಾಗಳನ್ನು ಅನುದಾನದ ಪಟ್ಟಿಯಿಂದ ಹೊರಗಿಡುವ ಪ್ರಸ್ತಾಪವನ್ನು ಕ್ಯಾಬಿನೆಟ್ ಸಭೆಯಲ್ಲಿ ಅಂಗೀಕರಿಸಲಾಗಿದೆ.
ಸಭೆಯು ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆಯಿತು ಮತ್ತು ಯುಪಿ ಸಂಪುಟದ ಎಲ್ಲಾ ಮಂತ್ರಿಗಳು ಭಾಗವಹಿಸಿದ್ದರು. ಈ ಮೂಲಕ ಯೋಗಿ ಸರ್ಕಾರವು ರಾಜ್ಯಾದ್ಯಂತ ಹೊಸ ಮದರಸಾಗಳಿಗೆ ಅನುದಾನ ನೀಡುವ ಎಲ್ಲಾ ಮಾರ್ಗಗಳನ್ನು ರದ್ದುಗೊಳಿಸಿದೆ.