Select Your Language

Notifications

webdunia
webdunia
webdunia
webdunia

ಹೆಣ್ಣುಮಕ್ಕಳು ಮೈ ಕಾಣುವಂತೆ ಬಟ್ಟೆ ಹಾಕ್ಕೊಂಡು ಬಂದ್ರೆ ಈ ದೇವಾಲಯಗಳಿಗೆ ನೋ ಎಂಟ್ರಿ

ಹೆಣ್ಣುಮಕ್ಕಳು ಮೈ ಕಾಣುವಂತೆ ಬಟ್ಟೆ ಹಾಕ್ಕೊಂಡು ಬಂದ್ರೆ ಈ ದೇವಾಲಯಗಳಿಗೆ ನೋ ಎಂಟ್ರಿ
ಡೆಹ್ರಾಡೂನ್ , ಮಂಗಳವಾರ, 6 ಜೂನ್ 2023 (12:35 IST)
ಡೆಹ್ರಾಡೂನ್ : ಉತ್ತರಾಖಂಡದ ಪ್ರಮುಖ ಮೂರು ದೇವಾಲಯಗಳ ಪ್ರವೇಶಕ್ಕೆ ಮಹಿಳೆಯರು ಮತ್ತು ಹುಡುಗಿಯರಿಗೆ ವಸ್ತ್ರ ಸಂಹಿತೆಯನ್ನು ಕಡ್ಡಾಯಗೊಳಿಸಲಾಗಿದೆ. ಮೈ ಕಾಣುವಂತೆ ಬಟ್ಟೆ ಹಾಕ್ಕೊಂಡು ಬಂದರೆ ದೇವಾಲಯಗಳಿಗೆ ಪ್ರವೇಶ ನೀಡಲ್ಲ ಎಂದು ಸೂಚನೆ ನೀಡಲಾಗಿದೆ.
 
ಉತ್ತರಾಖಂಡದ ಮಹಾನಿರ್ವಾಣಿ ಅಖಾರದ ಅಧೀನದಲ್ಲಿ ಬರುವ ದೇವಾಲಯಗಳಲ್ಲಿ ಈ ವಸ್ತ್ರ ಸಂಹಿತೆ ಕಡ್ಡಾಯ ಎನ್ನಲಾಗಿದೆ. ಮಹಾನಿರ್ವಾಣಿ ಅಖಾರದ ಕಾರ್ಯದರ್ಶಿ ಮತ್ತು ಅಖಿಲ ಭಾರತೀಯ ಅಖಾರ ಪರಿಷತ್ತಿನ ಅಧ್ಯಕ್ಷ ಶ್ರೀಮಹಾಂತ್ ರವೀಂದ್ರ ಪುರಿ ಅವರು, “ಮಹಿಳೆಯರು ಮತ್ತು ಹುಡುಗಿಯರು ತುಂಡುಡುಗೆ ಧರಿಸಿ ದೇವಾಲಯಗಳಿಗೆ ಪ್ರವೇಶಿಸುವಂತಿಲ್ಲ” ಎಂದು ತಿಳಿಸಿದ್ದಾರೆ. 

ಹರಿದ್ವಾರದ ಕಂಖಾಲ್ನಲ್ಲಿರುವ ದಕ್ಷ ಪ್ರಜಾಪತಿ ದೇವಾಲಯ, ಪೌರಿ ಜಿಲ್ಲೆಯ ನೀಲಕಂಠ ಮಹಾದೇವ ದೇವಾಲಯ ಮತ್ತು ಡೆಹ್ರಾಡೂನ್ನ ತಪಕೇಶ್ವರ ಮಹಾದೇವ ದೇವಾಲಯಗಳಲ್ಲಿ ಈ ನಿಯಮ ಜಾರಿಗೊಳಿಸಲಾಗಿದೆ. ದೇವಾಲಯವು ಆತ್ಮಾವಲೋಕನಕ್ಕೆ ಸ್ಥಳವಾಗಿದೆಯೇ ಹೊರತು ಮನರಂಜನೆಗಾಗಿ ಅಲ್ಲ. ಹೀಗಾಗಿ ದೇವಾಲಯಕ್ಕೆ ಭೇಟಿ ನೀಡುವ ಭಕ್ತರಲ್ಲಿ ನಿಯಮ ಪಾಲಿಸುವಂತೆ ಮನವಿ ಮಾಡಲಾಗಿದೆ ಎಂದು ರವೀಂದ್ರ ಅವರು ಹೇಳಿದ್ದಾರೆ.

ಮಹಿಳೆಯರು ಮತ್ತು ಹುಡುಗಿಯರು ದೇವಾಲಯದ ಪೂಜೆಗೆ ಆಗಮಿಸುವುದಿದ್ದರೆ, ಭಾರತೀಯ ಸಂಪ್ರದಾಯದ ಪ್ರಕಾರ ಬಟ್ಟೆಗಳನ್ನು ಧರಿಸಬೇಕು. ಆಗ ಮಾತ್ರ ಅವರಿಗೆ ದೇವಾಲಯಕ್ಕೆ ಪ್ರವೇಶ ಸಿಗುತ್ತದೆ. ದೇಹದ 80% ನಷ್ಟು ಭಾಗವನ್ನು ಮುಚ್ಚಿಕೊಂಡು ಬಂದರೆ ದೇವಾಲಯಗಳಿಗೆ ಬರಬಹುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಹಾರ್ಮೋನ್ ಮಾತ್ರೆ ತೆಗೆದುಕೊಳ್ಳುವಂತೆ ಮಗಳಿಗೆ ಒತ್ತಾಯಿಸಿದ ತಾಯಿ!