Select Your Language

Notifications

webdunia
webdunia
webdunia
webdunia

ಪ್ರಧಾನ ಮಂತ್ರಿಯಾಗುವ ಬಯಕೆಯಿಲ್ಲ: ನಿತೀಶ್ ಕುಮಾರ್

ಪ್ರಧಾನ ಮಂತ್ರಿಯಾಗುವ ಬಯಕೆಯಿಲ್ಲ: ನಿತೀಶ್ ಕುಮಾರ್
ಪಾಟ್ನಾ , ಸೋಮವಾರ, 6 ಜೂನ್ 2016 (20:47 IST)
ಮುಂಬರುವ ಚುನಾವಣೆಯಲ್ಲಿ ಬಿಜೆಪಿಯೇತರ ಫ್ರಂಟ್‌ನ ಪ್ರಧಾನಿ ಅಭ್ಯರ್ಥಿಯಾಗಲಿದ್ದಾರೆ ಎನ್ನುವ ವರದಿಗಳನ್ನು ತಳ್ಳಿಹಾಕಿದ ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್, ಪ್ರಧಾನಿಯಾಗಬೇಕು ಎನ್ನುವ ಬಯಕೆಯಿಲ್ಲ ಅಂತಹ ಕನಸು ಕಾಣುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 
 
 ನನ್ನ ರಾಜಕೀಯ ಜೀವನದಲ್ಲಿ ಒಂದು ಬಾರಿಯಾದರೂ ಸಂಸದನಾಗಬೇಕು ಎಂದು ಬಯಸಿದ್ದೆ. ಸಚಿವ, ಮುಖ್ಯಮಂತ್ರಿ, ಪ್ರಧಾನಮಂತ್ರಿಯಾಗುವ ಬಗ್ಗೆಯೂ ಕನಸು ಕಂಡಿಲ್ಲ ಎಂದು ತಿಳಿಸಿದ್ದಾರೆ. 
 
ಕೆಲವರು ನನ್ನ ಗೌರವಕ್ಕೆ ಕುಂದು ತಂದು ನಾನು ಯಾವತ್ತೂ ಪ್ರಧಾನಿಯಾಗದಂತೆ ನೋಡಿಕೊಳ್ಳಲು ಸಂಚು ರೂಪಿಸುತ್ತಿದ್ದಾರೆ. ಆದರೆ, ನನಗೆ ಪ್ರಧಾನಿಯಾಗುವ ಬಯಕೆಯಿಲ್ಲವಾಗಿದ್ದರಿಂದ ಅವರು ವಿಫಲ ಪ್ರಯತ್ನ ನಡೆಸಿದ್ದಾರೆ ಎಂದರು. 
 
ಆರ್‌ಜೆಡಿ ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ಶರದ್ ಪವಾರ್ ಮತ್ತು ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಬಾಬುಲಾಲ್ ಮೊರಾಂಡಿ ನಿತೀಶ್ ಕುಮಾರ್ ಅವರಿಗೆ ಪ್ರಧಾನಿಯಾಗುವ ಅರ್ಹತೆಯಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಐಸಿಸ್ ಉಗ್ರರೊಂದಿಗೆ ಸೆಕ್ಸ್‌ನಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ 10 ಮಹಿಳೆಯರ ಜೀವಂತ ದಹನ