Select Your Language

Notifications

webdunia
webdunia
webdunia
webdunia

100 ರೂ. ಲಂಚ ಕೊಟ್ಟರೆ ಮಾತ್ರ ಸಿಗುತ್ತೆ ವ್ಹೀಲ್ ಚೇರ್

100 ರೂ. ಲಂಚ ಕೊಟ್ಟರೆ ಮಾತ್ರ ಸಿಗುತ್ತೆ ವ್ಹೀಲ್ ಚೇರ್
ಹೈದ್ರಾಬಾದ್ , ಶನಿವಾರ, 18 ಮಾರ್ಚ್ 2017 (16:46 IST)
ಆಸ್ಪತ್ರೆಯ ಸಿಬ್ಬಂದಿಯ ಲಂಚ ದಾಹಕ್ಕೆ ಮಿತಿಯೇ ಇಲ್ಲದಂತಾಗಿದೆ. ಪ್ರತಿ ನಿತ್ಯ ಲಂಚ ಕೊಟ್ಟರೆ ಮಾತ್ರ ವ್ಹೀಲ್ ಚೇರ್ ಸಿಗುತ್ತೆ. ಹೌದು ಹೈದ್ರಾಬಾದ್`ನ ಗಾಂಧಿ ಆಸ್ಪತ್ರೆಯ ಲಂಚಾವತಾರ ಕಟು ಸತ್ಯವಿದು. ಪ್ರತಿ ನಿತ್ಯ ವ್ಹೀಲ್ ಚೇರ್ ಬೇಕೆಂದರೆ 100 ರೂ. ಲಂಚ ಕೊಡಬೇಕಂತೆ. ಲಂಚ ಕೊಟ್ಟು ಕೊಟ್ಟು ಕೈ ಖಾಲಿಯಾದ ಬಳಿಕ, ಲಂಚ ಕೊಡಲು ಹಣವಿಲ್ಲದೆ ಪ್ಯಾರಾಲಿಸಿಸ್`ಗೆ ತುತ್ತಾಗಿದ್ದ ವ್ಯಕ್ತಿ ಮಗುವಿನ ಆಟಿಕೆ ಸೈಕಲ್`ನಲ್ಲಿ ವಾರ್ಡ್`ಗೆ ತೆರಳಿದ್ದಾರೆ.
 

ರೋಗಿ ರಾಜು ಎಂಬಾತ ಆಟಿಕೆ ಸೈಕಲ್`ನಲ್ಲಿ ತೆರಳುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಶೇರ್ ಆಗಿದ್ದು, ಭಾರೀ ಆಕ್ರೋಶಕ್ಕೆ ಎಡೆಮಾಡಿದೆ.

ಕಳೆದ ವರ್ಷ ಆಗಸ್ಟ್`ನಲ್ಲಿ ಕರೆಂಟ್ ಶಾಕ್`ನಿಂದ ರಾಜು ಪ್ಯಾರಾಲಿಸಿಸ್`ಗೆ ಒಳಗಾಗಿದ್ದರು. 5 ಸದಸ್ಯರ ಸಂಸಾರದ ಹೊಣೆ ಬೇರೆ. ಹೀಗಾಗಿ, ಪತ್ನಿ ಸಹ ಅಕ್ಕಪಕ್ಕದ ಮನೆಯಲ್ಲಿ ಪಾತ್ರೆ ತೊಳೆದು 1500 ರೂ. ಸಂಪಾದಿಸುತ್ತಿದ್ದಾರಂತೆ.

`ಕಳೆದ ವರ್ಷ ವಿದ್ಯುತ್ ಅವಘಡದಲ್ಲಿ ನನ್ನ ಪತಿಯ ಎರಡೂ ಕಾಲುಗಳೂ ಸ್ವಾಧೀನ ಕಳೆದುಕೊಂಡಿವೆ. 100 ದಿನದಿಂದ ಚಿಕಿತ್ಸೆ ಪಡೆಯುತ್ತಿದ್ದೇವೆ.. ಚಿಕಿತ್ಸೆ ಪಡೆಯಲು 6ನೇ ಮಹಡಿಗೆ ಹೋಗಬೇಕಿರುವುದರಿಂದ ವ್ಹೀಲ್ ಚೇರ್ ಅಗತ್ಯವಿತ್ತು. ಪ್ರತಿ ದಿನ ವಾರ್ಡ್ ಬಾಯ್ ವ್ಹೀಲ್ ಚೇರ್`ಗೆ 50 ಅಥವಾ 100 ರೂ ತೆಗೆದುಕೊಳ್ಳುತ್ತಾನೆ. ಇವತ್ತು ನಮ್ಮ ಬಳಿ ಹಣವಿಲ್ಲ. ಹೀಗಾಗಿ, ನನ್ನ ಮಗನ ಆಟಿಕೆ ಸೈಕಲ್ ತಂದಿದ್ದೇವೆ ಅಂತಾರೆ ರಾಜು ಪತ್ನಿ

ಆಟಿಕೆ ಸೈಕಲ್`ನಲ್ಲೇ ಪತಿಯನ್ನ ಕೂರಿಸಿಕೊಂಡು ವಾರ್ಡ್`ಗಳಿಗೆ ಕರೆದೊಯ್ದಿದ್ದಾರೆ ಪತ್ನಿ.

Share this Story:

Follow Webdunia kannada

ಮುಂದಿನ ಸುದ್ದಿ

ಮರ್ಮಾಂಗ, ನಾಲಿಗೆಗೆ ಕತ್ತರಿ ಹಾಕಿದ ದುಷ್ಕರ್ಮಿಗಳು..!