Select Your Language

Notifications

webdunia
webdunia
webdunia
webdunia

ಪಾಕ್ ಕಲಾವಿದರ ಮೇಲೆ ನಿರ್ಬಂಧವಿಲ್ಲ : ಕೇಂದ್ರ ಸರ್ಕಾರ

ಪಾಕ್ ಕಲಾವಿದರ ಮೇಲೆ ನಿರ್ಬಂಧವಿಲ್ಲ : ಕೇಂದ್ರ ಸರ್ಕಾರ
ನವದೆಹಲಿ , ಶುಕ್ರವಾರ, 21 ಅಕ್ಟೋಬರ್ 2016 (16:49 IST)
ಪಾಕಿಸ್ತಾನ ಕಲಾವಿದರ ಮೇಲೆ ನಿಷೇಧ ಹೇರುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. 

ಉರಿ ದಾಳಿಯ ಬಳಿಕ ಪಾಕ್ ಕಲಾವಿದರಿಗೆ ನಿಷೇಧ ಹೇರಬೇಕು ಎಂಬ ಆಗ್ರಹ ಕೇಳಿ ಬರುತ್ತಿರುವುದಕ್ಕೆ ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್, ಪಾಕಿಸ್ತಾನ ಕಲಾವಿದರ ಮೇಲೆ ನಿಷೇಧ ಹೇರುವುದಿಲ್ಲ. ಪ್ರಸ್ತುತ ವಾತಾವರಣ, ಸುರಕ್ಷತೆಯ ಪರಿಗಣನೆ ಮತ್ತು ಸ್ಥಳೀಯ ಸಂಘಟನೆಕಾರರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಸಂದರ್ಭದ ಆಧಾರದ ಮೇಲೆ ನಾವು ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
 
ಪಾಕ್ ಭಾರತೀಯ ಟಿವಿ, ರೇಡಿಯೋಗಳ ಮೇಲೆ ನಿರ್ಬಂಧ ಹೇರಿರುವುದಕ್ಕೆ ಪ್ರತಿಕ್ರಿಯಿಸಿರುವ ಸ್ವರೂಪ್, ಪಾಕಿಸ್ತಾನಕ್ಕೆ ಆತ್ಮವಿಶ್ವಾಸದ ಕೊರತೆ ಇದೆ ಎಂಬುದು ಇದರಿಂದ ಗೊತ್ತಾಗುತ್ತದೆ. ಇದು ದುರದೃಷ್ಟಕರ ಬೆಳವಣಿಗೆ ಎಂದು ಹೇಳಿದ್ದಾರೆ. 
 
ಇಂದು 3 ಗಂಟೆಯಿಂದ ಜಾರಿಗೆ ಬರುವಂತೆ ಪಾಕಿಸ್ತಾನದಲ್ಲಿ ಎಲ್ಲಾ ಟಿವಿ ಹಾಗೂ ರೇಡಿಯೋಗಳನ್ನು ನಿಷೇಧಿಸಲಾಗಿದೆ. ಸರ್ಕಾರದ ಮನವಿ ಮೇರೆಗೆ ಪಾಕ್ ಮಾಧ್ಯಮ ನಿಯಂತ್ರಣ ಪ್ರಾಧಿಕಾರ ಒಕ್ಕೂಟ ಈ ಆದೇಶ ಹೊರಡಿಸಿದೆ.
 
ನಿಷೇಧವನ್ನು ಉಲ್ಲಂಘಿಸಿ ಯಾವುದಾದರೂ ವಾಹಿನಿ ಪ್ರಸಾರ ಮಾಡಿದರೆ ಅದರ ಪರವಾನಿಗೆಯನ್ನು ಅಮಾನತುಗೊಳಿಸಲಾಗುವುದು ಎಂದು ಪ್ರಾಧಿಕಾರ ತಿಳಿಸಿದೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಲೆಗ್ಗಿಂಗ್ಸ್, ಜೀನ್ಸ್ ನಿಷೇಧಿಸಿದ ವೈದ್ಯಕೀಯ ಕಾಲೇಜು