ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಸೋಮವಾರ ಮತ್ತೆ ವಿವಾದವನ್ನು ಮೈಗೆಳೆದುಕೊಂಡಿದ್ದಾರೆ. ನನ್ನ ಅಭಿಪ್ರಾಯದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮುಂದಿನ ಪ್ರಧಾನಿಯಾಗಬೇಕು ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಉಪ ಪ್ರಧಾನಿ ಆಗಬೇಕು ಎಂದು ಅವರು ಹೇಳಿದ್ದಾರೆ.
ಈ ಇಬ್ಬರು ರಾಜಕಾರಣಿಗಳು ಪ್ರಾಮಾಣಿಕರಾಗಿದ್ದು, ಅವರ ವಿರುದ್ಧ ಯಾವುದೇ ವೈಯಕ್ತಿಕ ಆಪಾದನೆ ದಾಖಲಾಗಿಲ್ಲ. ಹೀಗಾಗಿ ಅವರು ಪ್ರಧಾನಿ ಮತ್ತು ಉಪ ಪ್ರಧಾನಿಯಾಗಲು ಸಮರ್ಥರು ಎಂದು ಕಾಟ್ಜು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.
ದೇಶದ ರಾಜಕಾರಣಿಗಳನ್ನು ನಾನು ತುಂಬಾ ಟೀಕಿಸುತ್ತೇನೆ ಎಂದಿರುವ ಅವರು ನಿತೀಶ್ ಪ್ರಧಾನಿ ಮತ್ತು ಕೇಜ್ರಿವಾಲ್ ಉಪ ಪ್ರಧಾನಿಯಾಗಬೇಕೆಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಯಾರು ಪ್ರಧಾನಿ, ಉಪ ಪ್ರಧಾನಿಯಾಗಬೇಕೆಂಬುದನ್ನು ಈ ದೇಶದ ಜನರೇ ನಿರ್ಧರಿಸಬೇಕು ಎಂದು ಹೇಳಿದ್ದಾರೆ.