ನವದೆಹಲಿ: ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೇರುತ್ತಿರುವ ಎನ್ ಡಿಎ ಕೂಟಕ್ಕೆ ಈ ಬಾರಿ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಬದಲು ಹೊಸ ಹೆಸರು ಕೇಳಿಬರುತ್ತಿದೆ.
ಮೋದಿ ನೇತೃತ್ವದಲ್ಲಿ ಈ ಬಾರಿ ಚುನಾವಣೆ ಎದುರಿಸಿದ್ದು ಬಿಜೆಪಿ ಏಕಾಂಗಿಯಾಗಿ ಬಹಮತ ಸಾಧಿಸಿರಲಿಲ್ಲ. ಬದಲಾಗಿ ಎನ್ ಡಿಎ ಮೈತ್ರಿ ಕೂಟವೂ ಸರಳ ಬಹುಮತ ಸಾಧಿಸಲಷ್ಟೇ ಯಶಸ್ವಿಯಾಗಿದೆ. ಇದೀಗ ಬಿಜೆಪಿಗೆ ಸರ್ಕಾರ ರಚಿಸಲು ಮಿತ್ರ ಪಕ್ಷಗಳ ನೆರವು ಬೇಕು.
ಹೀಗಾದಲ್ಲಿ ಕೆಲವೊಂದು ವಿಚಾರದಲ್ಲಿ ಹೊಂದಾಣಿಕೆ ಮಾಡಿಕೊಳ್ಳಲೇಬೇಕಾಗುತ್ತದೆ. ನಿತೀಶ್ ಕುಮಾರ್ ಈ ಮೊದಲು ಮೋದಿ ಜೊತೆ ಮುನಿಸಿಕೊಂಡು ಯುಪಿಎ ಸೇರಿಕೊಂಡಿದ್ದರು. ತೀರಾ ಇತ್ತೀಚೆಗಷ್ಟೇ ಮರಳಿ ಎನ್ ಡಿಎಗೆ ಬಂದಿದ್ದರು.
ಬಹುಶಃ ಮೋದಿ ಪ್ರಧಾನಿ ಆಗುವುದಿದ್ದರೆ ಕೆಲವು ಮಿತ್ರ ಪಕ್ಷಗಳಿಂದ ವಿರೋಧ ವ್ಯಕ್ತವಾಗಬಹುದು. ಆಗ ಬಿಜೆಪಿ ಪ್ರಧಾನಿಯಾಗಿ ಅನಿವಾರ್ಯವಾಗಿ ಬೇರೊಬ್ಬ ಅಭ್ಯರ್ಥಿಯ ಹೆಸರು ಘೋಷಿಸಬೇಕಾದೀತು.
ಅಂತಹ ಸಂದರ್ಭ ಎದುರಾದರೆ ನಿತಿನ್ ಗಡ್ಕರಿಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಮುನ್ನಲೆಗೆ ತರಲು ಆರ್ ಎಸ್ಎಸ್ ನಾಯಕರಿಂದ ಸಲಹೆ ಕೇಳಿಬಂದಿದೆ ಎನ್ನಲಾಗಿದೆ. ನಿತಿನ್ ಗಡ್ಕರಿ ಕಳಂಕರಹಿತ ನಾಯಕ. ಇದುವರೆಗೆ ಕೇಂದ್ರದಲ್ಲಿ ಸಚಿವರಾಗಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಢಿದವರು. ವಿವಾದೀತ ನಾಯಕ ಮತ್ತು ಸ್ನೇಹ ಜೀವಿ. ಹೀಗಾಗಿ ಅವರನ್ನೇ ಪ್ರಧಾನಿ ಮಾಡಿದರೂ ಅಚ್ಚರಿಯಿಲ್ಲ.