Select Your Language

Notifications

webdunia
webdunia
webdunia
webdunia

ಕನ್ನಡ ಭಾಷೆ ಕಲಿಯುವುದಲ್ಲದೇ ಕರ್ನಾಟಕ ಹಿತಾಸಕ್ತಿಗೆ ಬದ್ಧಳಾಗಿದ್ದೇನೆ: ನಿರ್ಮಲಾ ಸೀತಾರಾಮನ್

ಕನ್ನಡ ಭಾಷೆ ಕಲಿಯುವುದಲ್ಲದೇ ಕರ್ನಾಟಕ ಹಿತಾಸಕ್ತಿಗೆ ಬದ್ಧಳಾಗಿದ್ದೇನೆ: ನಿರ್ಮಲಾ ಸೀತಾರಾಮನ್
ಬೆಂಗಳೂರು , ಮಂಗಳವಾರ, 31 ಮೇ 2016 (18:33 IST)
ಹೊರರಾಜ್ಯದವರು ಎನ್ನುವ ಟೀಕೆಗಳಿಂದ ಹೊರಬರಲು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಕನ್ನಡ ಭಾಷೆಯನ್ನು ಕಲಿಯುವುದಲ್ಲದೇ ಕನ್ನಡದ ಹಿತಾಸಕ್ತಿಗೆ ಬದ್ಧವಾಗಿರುತ್ತೇನೆ ಎಂದು ಭರವಸೆ ನೀಡಿದ್ದಾರೆ.
 
ಜೂನ್ 11 ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಗಾಗಿ ಇಂದು ಬಿಜೆಪಿ ಪರವಾಗಿ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸತ್ತಿನಲ್ಲಿ ಕರ್ನಾಟಕದ ಹಿತಾಸಕ್ತಿಯನ್ನು ಕಾಪಾಡುವುದಾಗಿ ತಿಳಿಸಿದ್ದಾರೆ.
   
ಬಿಜೆಪಿ ಕಾರ್ಯಕರ್ತಳಾಗಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಅನಂತ್ ಕುಮಾರ್ ಸೇರಿದಂತೆ ಇತರ ನಾಯಕರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದೇನೆ. ಖಚಿತವಾಗಿ ಗೆಲ್ಲುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.  
 
ತಮ್ಮನ್ನು ತಾವು ಪ್ರಧಾನ ಸೇವಕ ಎಂದು ಕರೆದುಕೊಳ್ಳುವ ಪ್ರಧಾನಮಂತ್ರಿ ಮೋದಿಯವರು ನನ್ನನ್ನು ಕಳುಹಿಸಿದ್ದಾರೆ. ಆದ್ದರಿಂದ ನಾನು ಕನ್ನಡದ ಸೇವಕಳಾಗಿ ಕಾರ್ಯನಿರ್ವಹಿಸುತ್ತೇನೆ. ಸಂಸತ್ತಿನಲ್ಲಿ ಕರ್ನಾಟಕದ ಪರವಾಗಿ ಹೋರಾಟ ಮಾಡಲು ಸಿದ್ದ ಎಂದು ಘೋಷಿಸಿದರು.
 
ಕನ್ನಡ ಭಾಷೆ ಅಲ್ಪ ಸ್ವಲ್ಪ ಬರುತ್ತದೆ. ಮುಂಬರುವ ದಿನಗಳಲ್ಲಿ ಕನ್ನಡ ಭಾಷೆ ಕಲಿತು ಸುಲಲಿತವಾಗಿ ಮಾತನಾಡುವ ವಿಶ್ವಾಸವಿದೆ ಎಂದು  ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಎಸ್‌ಸಿ, ಎಸ್‌ಟಿ ಟೆಂಡರ್ ಸುಗ್ರೀವಾಜ್ಞೆ: ರಾಜ್ಯಪಾಲರನ್ನು ಭೇಟಿ ಮಾಡಿದ ಸಚಿವ ಜಯಚಂದ್ರ