Select Your Language

Notifications

webdunia
webdunia
webdunia
webdunia

ಮತ್ತೆ ನಿರ್ಭಯಾ: 80ರ ವೃದ್ಧೆ ರೇಪ್, ಗುದದ್ವಾರದಲ್ಲಿ ಹಾರ್ಪಿಕ್ ತೂರಿ ಹತ್ಯೆ

ಮತ್ತೆ ನಿರ್ಭಯಾ: 80ರ ವೃದ್ಧೆ ರೇಪ್, ಗುದದ್ವಾರದಲ್ಲಿ ಹಾರ್ಪಿಕ್ ತೂರಿ ಹತ್ಯೆ
ಸೋನಿಪತ್ , ಶುಕ್ರವಾರ, 6 ಜನವರಿ 2017 (18:44 IST)
ಕಳೆದ ನಾಲ್ಕು ವರ್ಷಗಳ ಹಿಂದೆ ನವದೆಹಲಿಯಲ್ಲಿ ನಡೆದ ನಿರ್ಭಯಾ ಪ್ರಕರಣ ಪಕ್ಕದ ಹರಿಯಾಣಾದಲ್ಲಿ ಮರುಕಳಿಸಿದೆ. ಆದರೆ ಈ ಬಾರಿ ಕೀಚಕರಿಗೆ ಬಲಿಯಾಗಿದ್ದು 80 ವರ್ಷದ ವೃದ್ಧೆ. 

ಸೋನಿಪತ್ ಜಿಲ್ಲೆಯ ಬಾತ್‌ಗಾಂವ್‌ ಗ್ರಾಮದಲ್ಲಿ ಬುಧವಾರ ಈ ಹೇಯ ಕೃತ್ಯ ನಡೆದಿದ್ದು, ಅಪರಿಚಿತ ದುಷ್ಕರ್ಮಿಗಳು ವೃದ್ಧೆಯ ಗುದದ್ವಾರದಲ್ಲಿ ಟಾಯ್ಲೆಟ್ ಕ್ಲೀನರ್ ಹಾರ್ಪಿಕ್ ತೂರಿದ್ದಾರೆ. ಪರಿಣಾಮ ತೀವ್ರ ರಕ್ತಸ್ರಾವವಾಗಿ ವೃದ್ಧೆ ಸಾವನ್ನಪ್ಪಿದ್ದಾಳೆ. 
 
ಪ್ರಾಥಮಿಕ ತನಿಖೆಯಲ್ಲಿ ಪೊಲೀಸರಿಗೆ ಅತ್ಯಾಚಾರವಾದ ಬಗ್ಗೆ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ. ಆದರೆ ಇದು ಲೈಂಗಿಕ ದೌರ್ಜನ್ಯ ಎಸಗಿ ಮಾಡಲಾದ ಹತ್ಯೆ ಎಂದು ಪೊಲೀಸರು ಅನುಮಾನ ವ್ಯಕ್ತ ಪಡಿಸಿದ್ದಾರೆ. 
 
ಅಪರಿಚಿತ ದುಷ್ಕರ್ಮಿ ವೃದ್ಧೆಯ ಖಾಸಗಿ ಅಂಗಾಂಗದಲ್ಲಿ ಪ್ಲಾಸ್ಟಿಕ್‌ ಬಾಟಲಿಯಿಂದ ಗಾಯಗೊಳಿಸಿ ತೀವ್ರ ರಕ್ತ ಸ್ರಾವದಿಂದ ಸಾಯುವಂತೆ ಮಾಡಿದ್ದಾನೆ. 
 
ಘಟನೆ ನಡೆದಾಗ ಪೀಡಿತೆ ನೆಲ ಮಹಡಿಯಲ್ಲಿದ್ದಳು. ಆಕೆಯ ಇಬ್ಬರು ಪುತ್ರರಲ್ಲಿ ಒಬ್ಬ ಮೊದಲ ಮಹಡಿಯಲ್ಲಿ ತನ್ನ ಕುಟುಂಬದೊಂದಿದೆ ವಾಸವಾಗಿದ್ದಾನೆ. ವೃದ್ಧೆಯ ರಕ್ತಸಿಕ್ತ ಮೃತದೇಹ ಮನೆಯ ನೆಲ ಅಂತಸ್ತಿನಲ್ಲಿರುವ ಮಂಚದ ಮೇಲೆ ಪತ್ತೆಯಾಗಿದೆ. ವೃದ್ಧೆಯ ಶವವನ್ನು ಸೋನಿಪತ್‌ ಸಿವಿಲ್‌ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.  
 
ಮೃತಳ ಮರಣೋತ್ತರ ಪರೀಕ್ಷೆ ನಡೆಸಿರುವ ವೈದ್ಯರು ಈ ಹಿಂದೆ ನಾವು ಇಷ್ಟು ಕ್ರೂರತೆಯನ್ನು ಎಂದೂ ಕಂಡಿರಲಿಲ್ಲ. ಬಾಟಲಿಯನ್ನು ಎಷ್ಟು ಬಲದೊಂದಿಗೆ ತೂರಿದ್ದಾರೆ ಎಂದರೆ ಆಕೆಯ ಒಳಾಂಗಗಳಿಗೆಲ್ಲ ಗಾಯವಾಗಿ ತೀವ್ರ ರಕ್ತಸ್ರಾವವಾಗಿದೆ ಎಂದಿದ್ದಾರೆ. 
 
ಕಳೆದೊಂದು ವರ್ಷದಲ್ಲಿ ಹರಿಯಾಣದಲ್ಲಿ ನಡೆದ ಎರಡನೆಯ ಅತ್ಯಂತ ಕ್ರೂರ ಕೃತ್ಯವಿದು. ಫೆಬ್ರವರಿ 2016ರಲ್ಲಿ ಹಿಂದೆ ನೇಪಾಳಿ ಮೂಲದ 28 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾವೆಸಗಿದ್ದ ಆರೋಪಿಗಳು ಆಕೆಯ ಗುಪ್ತಾಂಗಗಳಲ್ಲಿ ಕಾಂಡೋಮ್, ಕೋಲನ್ನು ತೂರಿ ಹತ್ಯೆಗೈದಿದ್ದರು.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನೋಟು ನಿಷೇಧ ಜಾರಿಗೊಳಿಸಿದ್ದಕ್ಕಾಗಿ ಪ್ರಧಾನಿ ಮೋದಿಗೆ ಸನ್ಮಾನ: ಬಿಜೆಪಿ