Publish Date: Mon, 31 Aug 2020 (23:24 IST)
Updated Date: Mon, 31 Aug 2020 (23:27 IST)
ಕುಡುಕರಿಗೆ ಮತ್ತಷ್ಟು ಕಿಕ್ ಏರಿಸುವ ಹೊಸ ನ್ಯೂಸ್ ಬಂದಿದೆ.
ಕೊರೊನಾ ವೈರಸ್ ತಡೆಗಾಗಿ ವಿಧಿಸಲಾಗಿದ್ದ ಲಾಕ್ ಡೌನ್ ತೆರವುಗೊಂಡಿದ್ದು, ಇದೀಗ 4ನೇ ಹಂತದ ಅನ್ ಲಾಕ್ ನಲ್ಲಿ ಬಾರ್ ಗಳು ಓಪನ್ ಆಗಲಿವೆ.
ಬಾರ್ ಗಳು ಮಾತ್ರವಲ್ಲದೇ ಪಬ್, ರೆಸ್ಟೋರೆಂಟ್ ಗಳು ಆರಂಭಗೊಳ್ಳಲಿವೆ.
ಕೇಂದ್ರ ಸರಕಾರದ ಮಾರ್ಗಸೂಚಿಗಳನ್ನು ರಾಜ್ಯದಲ್ಲಿಯೂ ಜಾರಿಗೆ ತರಲಾಗುತ್ತಿದ್ದು, ಪಬ್, ಬಾರ್ ಗಳು ಒಂದಷ್ಟು ಅಗತ್ಯ ಕ್ರಮಗಳೊಂದಿಗೆ ಶುರುವಾಗುತ್ತಿವೆ.