Select Your Language

Notifications

webdunia
webdunia
webdunia
webdunia

ಅಚ್ಚರಿ: ತನ್ನಿಂತಾನೆ ಗಿರಗಿರನೆ ತಿರುಗುತಿದೆ ಬೇವಿನ ಗಿಡ ( ವಿಡಿಯೋ ನೋಡಿ)

ಅಚ್ಚರಿ: ತನ್ನಿಂತಾನೆ ಗಿರಗಿರನೆ ತಿರುಗುತಿದೆ ಬೇವಿನ ಗಿಡ ( ವಿಡಿಯೋ ನೋಡಿ)
ಕರೀಂನಗರ , ಶನಿವಾರ, 17 ಸೆಪ್ಟಂಬರ್ 2016 (14:14 IST)
ಗಿಡ ಗಿರಗಿರನೆ ತಿರುಗೋದನ್ನು ನೋಡಿದ್ದೀರಾ? ಹೌದು ತೆಲಂಗಾಣದಲ್ಲಿ ಈ ನಂಬಲಾಗದ ವಿದ್ಯಮಾನ ಬೆಳಕಿಗೆ ಬಂದಿದೆ.

ಪ್ರಕೃತಿ ಕೌತುಕಗಳ ಆಗರ. ಕೆಲವೊಂದು ಪ್ರಶ್ನೆಗಳಿಗೆ ಏನು ಮಾಡಿದರೂ ಉತ್ತರ ಕಂಡುಕೊಳ್ಳಲಾಗುವುದಿಲ್ಲ. ತೆಲಂಗಾಣದ ಕರೀಂನಗರದಲ್ಲಿ ಕಳೆದೆರಡು ದಿನಗಳಿಂದ ಒಂದು ವಿಚಿತ್ರ ನಡೆಯುತ್ತಿದೆ.
 
ಜಿಲ್ಲೆಯ ಸಿರಿಸಿಲ್ಲಾದ ಶಾಂತಿನಗರ ಬಡಾವಣೆಯ ಮನೆಯೊಂದರ ಮುಂದೆ ಪುಟ್ಟ ಬೇವಿನ ಗಿಡವೊಂದು ಗಿರಗಿರನೆ ತಿರುಗುತ್ತಿದೆ. ಅದನ್ನು ನೋಡಿದ ಜನರಲ್ಲಿ ಭಯ, ಆತಂಕ, ಭಕ್ತಿ ಒಮ್ಮೆಲೆ ಮೂಡುತ್ತಿದೆ. ಅದನ್ನು ಮುಟ್ಟುವ ಧೈರ್ಯ ಯಾರಿಗೂ ಇಲ್ಲ. ಆದರೂ ಆ ಗಿಡಕ್ಕೆ ದೈವಶಕ್ತಿ ಇದೆ ಎಂದು ಭಾವಿಸಿರುವ ಜನರು ಸುತ್ತಲೂ ಇಟ್ಟಿಗೆಗಳನ್ನು ಜೋಡಿಸಿ ಅರಿಸಿಣ-ಕುಂಕುಮ, ಹೂವು ಹಾಕಿ ಪೂಜೆ ಸಲ್ಲಿಸುತ್ತಿದ್ದಾರೆ.
 
ಈ ಕೌತುಕವನ್ನು ನೋಡಲು ಸಾಗರೋಪಾದಿಯಲ್ಲಿ ಜನರು ಹರಿದು ಬರುತ್ತಿದ್ದಾರೆ. 
 
ತನ್ನಿಂತಾನೆ ತಿರುಗುತ್ತಿರುವ ಈ ಬೇವಿನಗಿಡದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹರಿದಾಡುತ್ತಿದೆ. ಸ್ಥಳ ಪರಿಶೀಲಿಸಲು ಭೂಗರ್ಭ ಶಾಸ್ತ್ರಜ್ಞರು ಸ್ಥಳಕ್ಕೆ ಧಾವಿಸಿದ್ದಾರೆ.

ಗಿರಗಿಟ್ಲಿ ಗಿಡ
 

Share this Story:

Follow Webdunia kannada

ಮುಂದಿನ ಸುದ್ದಿ

ಜೆಡಿಎಸ್‌ಗೆ ಮೇಯರ್ ಸ್ಥಾನ: ಕುಮಾರಸ್ವಾಮಿಗೆ ಜಮೀರ್ ಟಾಂಗ್