Select Your Language

Notifications

webdunia
webdunia
webdunia
webdunia

ಐಎನ್ಎಸ್ ರಾಣಾ ಯುದ್ಧನೌಕೆಯಲ್ಲಿ ನಾವಿಕ ಆತ್ಮಹತ್ಯೆ

Navy sailor
ವಿಶಾಖಪಟ್ಟಣಂ , ಗುರುವಾರ, 1 ಜೂನ್ 2017 (14:59 IST)
ವಿಶಾಖಪಟ್ಟಣಂ:ವೈಜಾಗ್ ನ ಈಸ್ಟರ್ನ್ ನೌಲ್ ಕಮಾಂಡ್ ನಲ್ಲಿನ ಐಎನ್ಎಸ್ ರಾಣಾ ಯುದ್ಧನೌಕೆಯಲ್ಲಿ ಸೆಂಟ್ರಿ ಕೆಲಸ ಮಾಡುತ್ತಿದ್ದ ನಾವಿಕ ವಿಕಾಸ್ ಯಾದವ್ ತಮ್ಮ ಸರ್ವಿಸ್ ರಿವಾಲ್ವರ್ ನಿಂದಲೇ ಗುಂಡಿಟ್ಟುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. 
 
ಗುಂಡಿನ ಸದ್ದು ಕೇಳಿದ ಮತ್ತೊಬ್ಬ ನಾವಿಕ ಘಟನಾ ಸ್ಥಳಕ್ಕೆ ಬರುವಷ್ಟರಲ್ಲಿ ವಿಕಾಸ್ ಯಾದವ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕೂಡಲೇ ಅವರನ್ನು ಐಎನ್ಎಚ್ಎಸ್ ಕಲ್ಯಾಣಿಗೆ ಸಾಗಿಸಲಾಯಿತು. ಆದರೆ ಅಷ್ಟರಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. 
 
ಮಧ್ಯಪ್ರದೇಶದ ಭಿಂಡ್ ಮೂಲದ 21 ವರ್ಷದ ವಿಕಾಸ್ ಯಾದವ್ ನೌಕೆಯ ಪವರ್ ಕ್ಲಾಸ್ 1ರಲ್ಲಿ ಎಲೆಕ್ಟ್ರಿಕಲ್ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದರು. ಪ್ರಕರಣವನ್ನು ದಾಖಲಿಸಿಕೊಂಡಿರುವ ಮಲ್ಕಪುರಂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಜಿಕಲ್ ಸ್ಟ್ರೈಕ್ ಬಳಿಕ ಗಡಿ ನುಸುಳುವಿಕೆ ಕಡಿಮೆಯಾಗಿದೆ: ರಾಜನಾಥ್ ಸಿಂಗ್