ಬಿಜೆಪಿ ನಾಯಕತ್ವದ ವಿರುದ್ಧ ನವಜೋತ್ ಸಿಂಗ್ ಸಿದ್ದು ವಾಗ್ದಾಳಿ ನಡೆಸಿದ್ದರೂ ಪಂಜಾಬ್ ಬಿಜೆಪಿ ಸಂಸದರೊಬ್ಬರು ಸಿದ್ದು ಇನ್ನೂ ಬಿಜೆಪಿಯಲ್ಲಿದ್ದಾರೆ ಎಂದು ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ.
ನವಜೋತ್ ಸಿಂಗ್ ಸಿದ್ದು ಪಕ್ಷದ ಹಿರಿಯ ನಾಯಕರಾಗಿದ್ದಾರೆ. ಅವರು ರಾಜ್ಯಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರಬಹುದು. ಆದರೆ, ಅವರು ಇವತ್ತಿಗೂ ಬಿಜೆಪಿಯಲ್ಲಿದ್ದಾರೆ ಎಂದು ಬಿಜೆಪಿ ರಾಜ್ಯಸಭೆ ಸದಸ್ಯ ಶಾವೈತ್ ಮಲಿಕ್ ತಿಳಿಸಿದ್ದಾರೆ.
ನವಜೋತ್ ಸಿಂಗ್ ಸಿದ್ದು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎನ್ನುವ ವರದಿಗಳನ್ನು ತಳ್ಳಿಹಾಕಿದ ಅವರು ಸಿದ್ದು ಬಿಜೆಪಿಯಲ್ಲಿಯೇ ಇದ್ದಾರೆ.ಯಾವುದೇ ಅನುಮಾನ ಬೇಡ ಎಂದು ತಿಳಿಸಿದ್ದಾರೆ.
ರಾಜ್ಯಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ನಂತರ ಮೊದಲ ಬಾರಿಗೆ ಮಾತನಾಡಿದ್ದ ಸಿದ್ದು, ಪಂಜಾಬ್ ರಾಜ್ಯದಿಂದ ದೂರವಿರುವಂತೆ ಬಿಜೆಪಿ ಹೈಕಮಾಂಡ್ ಆದೇಶ ನೀಡಿದ್ದರಿಂದ ರಾಜೀನಾಮೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಬಿಜೆಪಿ ಹೈಕಮಾಂಡ್ ವಿರುದ್ಧ ವಾಗ್ದಾಳಿ ನಡೆಸಿರುವ ಕುರಿತಂತೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು,ಹೈಕಮಾಂಡ್ ಅವರ ಹೇಳಿಕೆಯ ಬಗ್ಗೆ ನಿರ್ಧರಿಸುತ್ತಿದೆ ಎಂದು ಶಾವೈತ್ ಮಲಿಕ್ ಹೇಳಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.