ನವದೆಹಲಿ: ರಾಷ್ಟ್ರ ದೆಹಲಿಯ ಅಧಿಕಾರದ ಚುಕ್ಕಾಣಿ 27 ವರ್ಷಗಳ ಬಳಿಕ ಬಿಜೆಪಿ ಹಿಡಿಯಲಿದೆ ಎಂದು ಮತ್ತೊಂದು ಸಮೀಕ್ಷೆಯಿಂದ ಬಹಿರಂಗವಾಗಿದೆ.
ಎಕ್ಸಿಸ್ ಮೈ ಇಂಡಿಯಾ ಇಂದು ತನ್ನ ಚುನಾಣೋತ್ತರ ಸಮೀಕ್ಷೆಯನ್ನು ಪ್ರಕಟಿಸಿದ್ದು, ಬಿಜೆಪಿ ಮೈತ್ರಿಕೂಟ 45ರಿಂದ55, ಎಎಪಿ ಪಕ್ಷ 15ರಿಂದ 25, ಕಾಂಗ್ರೆಸ್ 0ರಿಂದ 1 ಸ್ಥಾನ ಗೆಲ್ಲಬಹುದು ಎಂದು ಭವಿಷ್ಯ ನುಡಿದಿದೆ.
ಬಿಜೆಪಿ+(ಬಿಜೆಪಿ, ಜೆಡಿಯು, ಎಲ್‌ಜೆಪಿ) ಶೇ 48 ಮತ ಪಡೆದರೆ, ಎಎಪಿ ಪಕ್ಷ ಶೇ 42, ಕಾಂಗ್ರೆಸ್ ಶೇ 3 ಮತ ಪಡೆಯಲಿದೆ ಎಂದು ತಿಳಿಸಿದೆ. ಇಲ್ಲಿಯವರೆಗೆ ಪ್ರಕಟವಾದ 11 ಸಮೀಕ್ಷೆಗಳಲ್ಲಿ 9 ಸಮೀಕ್ಷೆಗಳು ಬಿಜೆಪಿ ಗೆಲ್ಲಲಿದೆ ಎಂದು ಹೇಳಿದರೆ 2 ಸಮೀಕ್ಷೆಗಳು ಆಪ್ ಜಯಗಳಿಸಲಿದೆ ಎಂದು ತಿಳಿಸಿದೆ.
ಫೆ.8 ರಂದು ದೆಹಲಿ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಒಟ್ಟು 70 ಸ್ಥಾನಗಳಿದ್ದು ಸರಳ ಬಹುಮತಕ್ಕೆ 36 ಸ್ಥಾನಗಳ ಅಗತ್ಯವಿದೆ.