ನಾಸಿಕ್: 500, 1000 ರೂ. ಮುಖಬೆಲೆಯ ನೋಟುಗಳನ್ನು ರದ್ದು ಪಡಿಸಿದ ನಂತರ 2000 ರೂ. ನೋಟುಗಳಷ್ಟೇ ಜಾಸ್ತಿ ಚಲಾವಣೆಯಲ್ಲಿ ಕಂಡುಬಂದಿತ್ತು. ಇದೀಗ 50 ಲಕ್ಷ ಮೌಲ್ಯದ 500 ರೂ. ಮುಖಬೆಲೆಯ ನೋಟುಗಳು ಮುದ್ರಿತವಾಗಿದ್ದು ಆರ್.ಬಿ.ಐ. ಖಜಾನೆಗೆ ನಾಸಿಕ್ ನಿಂದ ರವಾನೆಯಾಗಿದೆ.
ಮಹಾರಾಷ್ಟ್ರದ ನಾಸಿಕ್ ಪ್ರೆಸ್‌ನಿಂದ ಈ ನೂತನ 500 ರೂ. ನೋಟುಗಳು ಮುದ್ರಿತವಾಗಿದ್ದು, ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಇಂದು ರವಾನೆಯಾಗಿದೆ. ಮೊದಲ ಹಂತದಲ್ಲಿ 50 ಲಕ್ಷ ಮೌಲ್ಯದ ಹಣವನ್ನು ಮುದ್ರಿಸಿದ್ದು, ಬುಧವಾರದೊಳಗೆ ಎರಡನೇ ಹಂತದಲ್ಲಿ ಮತ್ತೆ 50 ಲಕ್ಷ ಮೌಲ್ಯದ 500 ಹೊಸ ನೋಟುಗಳನ್ನು ನಾಸಿಕ್ ಪ್ರೆಸ್ ಮುದ್ರಿಸಲಿದೆ ಎಂದು ತಿಳಿದು ಬಂದಿದೆ.
ಎಸ್ಪಿಎಂಸಿಐಎಲ್ ಒಂಭತ್ತು ಘಟಕಗಳಲ್ಲಿ ಒಂದಾದ ಸಿಎನ್ಪಿಯಲ್ಲಿ 20, 50 ಮತ್ತು 100 ನೋಟುಗಳನ್ನು ಸಹ ಮುದ್ರಿಸಲಾಗುತ್ತಿದೆ. ಮಾಹಿತಿ ಪ್ರಕಾರ ಭಾರತೀಯ ರಿಸರ್ವ್ ಬ್ಯಾಂಕ್ ಈಗಾಗಲೇ ಮೈಸೂರು ಮತ್ತು ಪಶ್ಚಿಮ ಬಂಗಾಳದ ಸಲ್ಬೋನಿ ಎಂಬಲ್ಲಿ 2000 ಮತ್ತು 500 ಹೊಸ ನೋಟುಗಳನ್ನು ಮುದ್ರಣ ಮಾಡಿದೆ. ಆದಾಗ್ಯೂ ಎಸ್ಪಿಎಂಸಿಐಎಲ್ ನ ಘಟಕಗಳಾದ ನಾಶಿಕ್ ಮತ್ತು ಮಧ್ಯಪ್ರದೇಶದ ದೆವಾಸ್ ಪ್ರೆಸ್‌ನಲ್ಲಿ ಈಗ ಹೊಸ 500 ನೋಟುಗಳು ಮುದ್ರಣ ಮಾಡಿದೆ. ಪ್ರಸ್ತುತ ಆರ್ಥಿಕ ವರ್ಷದಲ್ಲಿ ಹೊಸ 500 ನೋಟುಗಳ 4000 ಲಕ್ಷ ನೋಟುಗಳನ್ನು ಮುದ್ರಿಸುವ ಗುರಿ ಇಟ್ಟುಕೊಂಡಿದೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ