Select Your Language

Notifications

webdunia
webdunia
webdunia
webdunia

ವೈಮಾನಿಕ ಕ್ಷೇತ್ರಕ್ಕೆ ಹೊಸ ಬಲ ನೀಡಲಿದೆ: ನರೇಂದ್ರ ಮೋದಿ

ವೈಮಾನಿಕ ಕ್ಷೇತ್ರಕ್ಕೆ ಹೊಸ ಬಲ ನೀಡಲಿದೆ: ನರೇಂದ್ರ ಮೋದಿ
ನವದೆಹಲಿ , ಗುರುವಾರ, 21 ಅಕ್ಟೋಬರ್ 2021 (07:46 IST)
ನವದೆಹಲಿ : ಏರ್ ಇಂಡಿಯಾ ಕಂಪನಿಯನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಟಾಟಾ ಗ್ರೂಪ್ ಸಿದ್ಧವಾಗುತ್ತಿದೆ. ಸರ್ಕಾರದ ಅಧೀನದಲ್ಲಿದ್ದ ಏರ್ ಇಂಡಿಯಾ ಹಸ್ತಾಂತರ ಪ್ರಕ್ರಿಯೆಯು ದೇಶದ ವೈಮಾನಿಕ ಕ್ಷೇತ್ರಕ್ಕೆ ಹೊಸ ಬಲ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ನಷ್ಟದಲ್ಲಿದ್ದ ಏರ್ ಇಂಡಿಯಾ ವಿಲೇವಾರಿ ಮಾಡುವ ಮೂಲಕ ಬಂಡವಾಳ ಹಿಂಪಡೆಯುವ ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡಿತ್ತು.
ಕುಶಿನಗರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆಯ ನಂತರ ಮಾತನಾಡಿದ ಮೋದಿ, ಏರ್ ಇಂಡಿಯಾ ವಿಚಾರದಲ್ಲಿ ಸರ್ಕಾರ ತೆಗೆದುಕೊಂಡ ನಿರ್ಧಾರವು ದೇಶದ ವೈಮಾನಿಕ ರಂಗವನ್ನು ವೃತ್ತಿಪರವಾಗಿ ನಡೆಸಲು ನೆರವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಏರ್ ಇಂಡಿಯಾ ಖರೀದಿಗೆ ಟಾಟಾ ಗ್ರೂಪ್ ₹ 2,700 ನಗದು ಪಾವತಿಸಲಿದೆ. ಇದರ ಜೊತೆಗೆ ಏರ್ಇಂಡಿಯಾದ ಸಾಲದಲ್ಲಿ ₹ 15,300 ಕೋಟಿ ಮೊತ್ತದ ಜವಾಬ್ದಾರಿ ವಹಿಸಿಕೊಳ್ಳಲಿದೆ.
ಏರ್ ಇಂಡಿಯಾ ಜೊತೆಗೆ ಕಡಿಮೆ ವೆಚ್ಚದಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವ ಕಂಪೆನಿ ಏರ್ ಇಂಡಿಯಾ ಎಕ್ಸ್ಪ್ರೆಸ್ ಮತ್ತು ವಿಮಾನ ನಿಲ್ದಾಣಗಳಲ್ಲಿರುವ ಏರ್ ಇಂಡಿಯಾದ ಆಸ್ತಿ ನಿರ್ವಹಿಸುವ ‘ಅಸಿಟ್ಸ್’ ಉದ್ಯಮದಲ್ಲಿ ಅರ್ಧದಷ್ಟು ಪಾಲನ್ನು ಟಾಟಾ ಕಂಪೆನಿ ತನ್ನ ಸುಪರ್ದಿಗೆ ಪಡೆದುಕೊಳ್ಳಲಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಹಾನಿ ತಡೆಗೆ ಮೋದಿ ಯತ್ನ?