Select Your Language

Notifications

webdunia
webdunia
webdunia
webdunia

ಸ್ಮಾರ್ಟ್ ಸಿಟಿ ಯೋಜನೆಗೆ ಜೂನ್ 25 ರಂದು ಚಾಲನೆ

ಸ್ಮಾರ್ಟ್ ಸಿಟಿ ಯೋಜನೆಗೆ ಜೂನ್ 25 ರಂದು ಚಾಲನೆ
ನವದೆಹಲಿ , ಶುಕ್ರವಾರ, 24 ಜೂನ್ 2016 (16:52 IST)
ಈಗಾಗಲೇ  ಆಯ್ಕೆಯಾಗಿರುವ 20 ನಗರಗಳಲ್ಲಿ ಜೂನ್ 25 ರಂದು ಪ್ರಧಾನಿ ನರೇಂದ್ರ ಮೋದಿ ಸ್ಮಾರ್ಟ್ ಸಿಟಿ ಯೋಜನೆಗೆ ಚಾಲನೆ ನೀಡಲಿದ್ದಾರೆ.

ಮಹಾರಾಷ್ಟ್ರದ ಪುಣೆಯಲ್ಲಿ 14 ಯೋಜನೆಗಳಿಗೆ ಚಾಲನೆ ನೀಡಲಿದ್ದು ಉಳಿದ 69 ಯೋಜನೆಗಳು ದೇಶದ ಇತರ ಭಾಗಗಳಲ್ಲಿ ಪ್ರಾರಂಭವಾಗಲಿವೆ. ಮೊದಲ ಹಂತದಲ್ಲಿ ಈ ಯೋಜನೆಗೆ 1,770 ಕೋಟಿ ರೂಪಾಯಿ ವೆಚ್ಚವಾಗಲಿದೆ. 
 
ಸರ್ಕಾರದ ಪ್ರಮುಖ ಕಾರ್ಯಕ್ರಮದ ಪ್ರಕಟಣೆಯ ಮೊದಲ ವಾರ್ಷಿಕೋತ್ಸವದ ಗುರುತಿಗಾಗಿ ಪುಣೆಯಲ್ಲಿ 5,000 ಜನರ ಸಾಮರ್ಥ್ಯದ ಶಿವ ಛತ್ರಪತಿ ಕ್ರೀಡಾ ಸಂಕೀರ್ಣ ಯೋಜನೆಗೆ ಪ್ರಧಾನಿ ಹಸಿರು ನಿಶಾನೆ ತೋರಲಿದ್ದಾರೆ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 
 
ಇದೇ ಸಂದರ್ಭದಲ್ಲಿ ಬೆಳಗಾವಿ, ಅಹಮದಾಬಾದ್, ಭುವನೇಶ್ವರ, ಜಬಲ್​ಪುರ, ಕಾಕಿನಾಡ, ಕೊಚ್ಚಿ ಮತ್ತ ಜೈಪುರ ಸೇರಿದಂತೆ ಒಟ್ಟು 19 ನಗರಗಳಲ್ಲಿ 69 ಯೋಜನೆಗೆಳಿಗೆ ಚಾಲನೆ ಸಿಗಲಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜಕೀಯ ತಾಳ್ಮೆಯಿರಬೇಕು: ಭಿನ್ನಮತೀಯರಿಗೆ ಡಿ.ಕೆ.ಶಿವಕುಮಾರ್ ಸಲಹೆ