Select Your Language

Notifications

webdunia
webdunia
webdunia
webdunia

ವಿಶೇಷ ದಿನದಂದು ಕನ್ನಡ ಭಕ್ತಿಗೀತೆ ಹಂಚಿಕೊಂಡ ನರೇಂದ್ರ ಮೋದಿ

PM Narendra Modi
Photo Credit X
ಬೆಂಗಳೂರು:  ಪ್ರಧಾನಿ ನರೇಂದ್ರ ಮೋದಿ ಅವರು ಚೈತ್ರ ನವರಾತ್ರಿಯ ಪ್ರಯುಕ್ತ ಕನ್ನಡದ ಭಕ್ತಿಗೀತೆಯೊಂದನ್ನು ತಮ್ಮ ಸಾಮಾಜಿಕ ತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. 

ಡಾ. ರಾಜಕುಮಾರ್ ಅಭಿನಯದ ಕನ್ನಡದ ಪ್ರಸಿದ್ಧ ‘ಶ್ರೀ ಕೃಷ್ಣದೇವರಾಯ’ ಸಿನಿಮಾದಲ್ಲಿನ ‘ಶ್ರೀ ಚಾಮುಂಡೇಶ್ವರಿ, ಅಮ್ಮ ಶ್ರೀ ಚಾಮುಂಡೇಶ್ವರಿ’ ಎಂಬ ವಿಡಿಯೊ ಭಕ್ತಿಗೀತೆಯ ಯೂಟ್ಯೂಬ್ ಲಿಂಕ್‌ನ್ನು ಪ್ರಧಾನಿ ಅವರು ಹಂಚಿಕೊಂಡಿದ್ದು ಗಮನ ಸೆಳೆದಿದೆ.

ಇನ್ನೂ ಈ ಹಾಡನ್ನು ಹಂಚಿಕೊಂಡು ವಿಶ್ವಮಾತೆಯ ಮೇಲಿನ ಅಚಲ ನಂಬಿಕೆಯು ಆಕೆಯ ಭಕ್ತರಲ್ಲಿ ಹೊಸ ಪ್ರಜ್ಞೆ ಮತ್ತು ಚೈತನ್ಯವನ್ನು ತುಂಬುತ್ತದೆ ಎಂದು ಮೋದಿ ಅವರು ಚೈತ್ರ ನವರಾತ್ರಿಯ ಶುಭಾಶಯಗಳನ್ನು ಜನತೆಗೆ ತಿಳಿಸಿದ್ದಾರೆ.

ಬಿ.ಆರ್.ಪಂತಲು ಅವರು ನಿರ್ದೇಶಿಸಿದ್ದ ಶ್ರೀ ಕೃಷ್ಣದೇವರಾಯ ಸಿನಿಮಾ 1970 ರಲ್ಲಿ ಬಿಡುಗಡೆಯಾಗಿ  ಭಾರೀ ಜನಮನ್ನಣೆ ಗಳಿಸಿತ್ತು.  ಈ ಚಿತ್ರದಲ್ಲಿ ಡಾ. ರಾಜಕುಮಾರ್, ಭಾರತಿ, ಜಯಂತಿ, ಆರ್.ನಾಗೇಂದ್ರರಾವ್, ಬಿ.ಆರ್.ಪಂತಲು, ನರಸಿಂಹರಾಜು ಸೇರಿದಂತೆ ಅನೇಕರು ನಟಿಸಿದ್ದರು.


Share this Story:

Follow Webdunia kannada

ಮುಂದಿನ ಸುದ್ದಿ

ದಾರಿ ವಿಚಾರವಾಗಿ ನಡೆದ ಗಲಾಟೆ ಸಾವಿನಲ್ಲಿ ಅಂತ್ಯ, ಆರೋಪಿ ಅರೆಸ್ಟ್‌