Select Your Language

Notifications

webdunia
webdunia
webdunia
webdunia

ಭಾರತೀಯ ಸೇನೆ ಮಾತನಾಡಲ್ಲ, ಕೇವಲ ಕಾರ್ಯಾಚರಣೆ: ಪ್ರಧಾನಿ ಮೋದಿ

ಭಾರತೀಯ ಸೇನೆ ಮಾತನಾಡಲ್ಲ, ಕೇವಲ ಕಾರ್ಯಾಚರಣೆ: ಪ್ರಧಾನಿ ಮೋದಿ
ಭೋಪಾಲ್ , ಶುಕ್ರವಾರ, 14 ಅಕ್ಟೋಬರ್ 2016 (19:51 IST)
ಭಾರತೀಯ ಸೇನೆ ಯಾವತ್ತೂ ಮಾತನಾಡುವುದಿಲ್ಲ ಬದಲಿಗೆ ಕಾರ್ಯಾಚರಣೆ ನಡೆಸುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
 
ಸೀಮಿತ ದಾಳಿಯನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ, ದೇಶ ರಕ್ಷಣೆಯೇ ಭಾರತೀಯ ಸೇನೆಯ ಹೆಮ್ಮೆಯ ಕರ್ತವ್ಯವಾಗಿದೆ. ದೇಶಕ್ಕಾಗಿ ಯಾವ ಹೊಣೆ ಬೇಕಾದರೂ ಸೇನೆ ನಿಭಾಯಿಸಲು ಸಿದ್ದವಿದೆ ಎಂದರು. 
 
ನಗರದ ಲಾಲ್ ಪರೇಡ್ ಕ್ರೀಡಾಂಗಣದಲ್ಲಿ ಮಾತನಾಡಿದ ಮೋದಿ,  ನಮ್ಮ ಸೈನಿಕರ ಬಗ್ಗೆ ಮಾತನಾಡುವಾಗ ಅವರ ಡ್ರೆಸ್ ಮತ್ತು ಪಡೆದ ಪದಕಗಳ ಬಗ್ಗೆ ಮಾತನಾಡುತ್ತೇವೆ. ಅವರನ್ನು ಮಾನವೀಯತೆಯ ದೃಷ್ಟಿಯಿಂದ ಕಾಣಬೇಕಾಗಿರುವುದು ಅಗತ್ಯವಾಗಿದೆ ಎಂದರು. 
 
ಹುತಾತ್ಮರಾದ ಸೈನಿಕರಿಗೆ ಮತ್ತು ಅವರ ಕುಟುಂಬಗಳಿಗೆ ಶೃದ್ಧಾಂಜಲಿ ಅರ್ಪಿಸುವ ಸೌಭಾಗ್ಯ ನನಗೆ ಒದಗಿ ಬಂದಿದೆ ಎಂದು ಶೌರ್ಯ ಸಮ್ಮಾನ್ ಸಭಾ ಕಾರ್ಯಕ್ರಮಲ್ಲಿ ಮೋದಿ ತಿಳಿಸಿದರು.
 
ಜಮ್ಮು ಶ್ರೀನಗರದಲ್ಲಿ ಪ್ರವಾಹ ಬಂದಾಗ ಭಾರತೀಯ ಸೇನೆ ಹಲವಾರು ಜನರನ್ನು ರಕ್ಷಿಸಿತ್ತು. ಇದೇ ವ್ಯಕ್ತಿಗಳೇ ನಮ್ಮ ಮೇಲೆ ಕಲ್ಲು ಹೊಡೆಯುತ್ತಿರುವುದು ಎಂದು ಯಾವತ್ತು ಚಿಂತನೆ ಮಾಡಲ್ಲ. ಇದೇ ನಮ್ಮ ದೇಶದ ಹೆಮ್ಮಯ ಸೈನಿಕರ ಗುಣವಾಗಿದೆ ಎಂದು ಕೊಂಡಾಡಿದರು.
 
ಯೆಮನ್ ದೇಶದಲ್ಲಿ ಪ್ರವಾಹ ಪ್ರಕೋಪ ಎದುರಾದಾಗ ಭಾರತೀಯ ಸೇನೆ ಕೇವಲ ಅಲ್ಲಿದ್ದ ಭಾರತೀಯರನ್ನು ರಕ್ಷಿಸಲಿಲ್ಲ. ಪಾಕಿಸ್ತಾನ, ಯೆಮನ್ ಸೇರಿದಂತೆ ಇತರ ರಾಷ್ಟ್ರಗಳ ನಾಗರಿಕರನ್ನು ರಕ್ಷಿಸಿತ್ತು ಎನ್ನುವುದನ್ನು ಮರೆಯಬಾರದು ಎಂದು ಪ್ರಧಾನಿ ಮೋದಿ ತಿಳಿಸಿದರು. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಅವನತಿಯತ್ತ ಸಾಗಿದೆ, ದಯನೀಯ ಸ್ಥಿತಿಯಲ್ಲಿದೆ: ಯಡಿಯೂರಪ್ಪ