Select Your Language

Notifications

webdunia
webdunia
webdunia
webdunia

ಮೋದಿ ಸರ್ಕಾರ ಅಗಸ್ಟಾ ವೆಸ್ಟ್​ಲ್ಯಾಂಡ್‌ನ್ನು ರಕ್ಷಿಸುತ್ತಿದೆ: ಕಾಂಗ್ರೆಸ್

ಮೋದಿ ಸರ್ಕಾರ ಅಗಸ್ಟಾ ವೆಸ್ಟ್​ಲ್ಯಾಂಡ್‌ನ್ನು ರಕ್ಷಿಸುತ್ತಿದೆ: ಕಾಂಗ್ರೆಸ್
ನವದೆಹಲಿ , ಶುಕ್ರವಾರ, 29 ಏಪ್ರಿಲ್ 2016 (18:26 IST)
ಅಗಸ್ಟಾ ವೆಸ್ಟ್​ಲ್ಯಾಂಡ್ ವಿವಿಐಪಿ ಹಗರಣಕ್ಕೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷದ ಮೇಲೆ ಪ್ರತಿದಾಳಿ ನಡೆಸಿರುವ ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಎರಡು ವರ್ಷಗಳಿಂದ  ರಕ್ಷಣಾ ಸಂಸ್ಥೆ (ಅಗಸ್ಟಾ ವೆಸ್ಟ್​ಲ್ಯಾಂಡ್)ನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದೆ. 
 
ವಾಸ್ತವವಾಗಿ ಹೇಳಬೇಕೆಂದರೆ ಅಗಸ್ಟಾ ವೆಸ್ಟ್ ಲ್ಯಾಂಡ್ ಕಂಪನಿಯನ್ನು ರಕ್ಷಿಸುತ್ತಿರುವುದು ನರೇಂದ್ರ ಮೋದಿ ಸರ್ಕಾರ. ಸಿಬಿಐ ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದರೂ ಸಹ ವಿವಿಐಪಿ ಹೆಲಿಕಾಫ್ಟರ್  ಹಗರಣದಲ್ಲಿ ಭಾಗಿಯಾಗಿರುವ ಅಗಸ್ಟಾ ವೆಸ್ಟ್ ಲ್ಯಾಂಡ್ ಕಂಪನಿಯನ್ನು ಮೋದಿ ಸರ್ಕಾರ ರಕ್ಷಿಸುತ್ತಿರುವುದೇಕೆ ಎಂದು ಕಾಂಗ್ರೆಸ್ ವಕ್ತಾರ ರಣ್ ದೀಪ್ ಸುರ್ಜೇವಾಲಾ ಪ್ರಶ್ನಿಸಿದ್ದಾರೆ.
 
ಎನ್‌ಡಿಎ ಸರ್ಕಾರ ಟಾಟಾ ಹಾಗೂ ಅಗಸ್ಟಾ ವೆಸ್ಟ್ ಲ್ಯಾಂಡ್ ಪಾಲುದಾರಿಕೆಯ ರೋಟೋಕ್ರಾಫ್ಟ್ ಕಂಪನಿಗೆ  2015ರಲ್ಲಿಎಫ್ಐಪಿಬಿ ಅನುಮತಿ ನೀಡಿತ್ತು ಎಂದು ಆರೋಪಿಸಿರುವ ಸುರ್ಜೇವಾಲ ಈ ಬಗ್ಗೆ ರಕ್ಷಣಾ ಮಂತ್ರಿ ಉತ್ತರಿಸುತ್ತಾರಾ ಎಂದು ಪ್ರಶ್ನೆಯನ್ನಿಟ್ಟಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಅಮೇರಿಕಾ ಸಂಸತ್ ಉದ್ದೇಶಿಸಿ ಮಾತನಾಡಲಿರುವ ಪ್ರಧಾನಿ ಮೋದಿ