ನವದೆಹಲಿ: ನಿನ್ನೆ ಪಟಿಯಾಲಾದ ನಾಭಾ ಜೈಲಿನಿಂದ ನಾಟಕೀಯ ರೀತಿಯಲ್ಲಿ ತಪ್ಪಿಸಿಕೊಂಡಿದ್ದ ಲಿಬರೇಷನ್ ಖಾಲಿಸ್ತಾನ ಸಂಘಟನೆಯ ಮುಖ್ಯಸ್ಥ ಹರ್ಮಿಂದರ್ ಮಿಂಟೂ ನವದೆಹಲಿಯ ರೈಲ್ವೇ ನಿಲ್ದಾಣದಲ್ಲಿ ಪೊಲೀಸರಿಗೆ ಸೆರೆ ಸಿಕ್ಕಿದ್ದಾನೆ.
ನಿನ್ನೆ ನಾಟಕೀಯ ರೀತಿಯಲ್ಲಿ ಕೆಲವು ಶಸ್ತ್ರ ಸಜ್ಜಿತ ಯುವಕರ ಗುಂಪು ನಾಭಾ ಜೈಲಿಗೆ ನುಗ್ಗಿ ಯದ್ವಾ ತದ್ವಾ ಗುಂಡು ಹಾರಿಸಿ, ಐವರು ಆರೋಪಿಗಳನ್ನು ತಮ್ಮ ಜತೆಗೆ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದರು. ಕೂಡಲೇ ಪಂಜಾಬ್ ಪೊಲೀಸರು ಇವರ ಪತ್ತೆಗಾಗಿ ಚುರುಕಿನ ಕಾರ್ಯಾಚರಣೆ ನಡೆಸಿತ್ತು. ಅಲ್ಲದೆ ಪ್ರಮುಖ ರೈಲ್ವೇ, ಬಸ್ ನಿಲ್ದಾಣಗಳಲ್ಲಿ ಪೊಲೀಸರು ಹದ್ದಿನಗಣ್ಣಿರಿಸಿದ್ದರು.
ಈ ಬಗ್ಗೆ ಸ್ವತಃ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಮಾಹಿತಿ ನೀಡಿದ್ದಾರೆ. ಅಲ್ಲದೆ ಇನ್ನುಳಿದ ನಾಲ್ವರು ಆರೋಪಿಗಳ ಪತ್ತೆಗಾಗಿ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ. ಈಗಾಗಲೇ ಆರೋಪಿಗಳ ಬಗ್ಗೆ ಸುಳಿವು ನೀಡಿದವರಿಗೆ 25ಲಕ್ಷ ಬಹುಮಾನ ಮೊತ್ತ ಘೋಷಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ