Select Your Language

Notifications

webdunia
webdunia
webdunia
webdunia

ಕಪ್ಪು ಹಣ ಎಲ್ಲಿತ್ತು ಎನ್ನುವುದು ದೇಶದ ಜನತೆಗೆ ಗೊತ್ತಾಗಿದೆ: ಮೋದಿ

ಕಪ್ಪು ಹಣ ಎಲ್ಲಿತ್ತು ಎನ್ನುವುದು ದೇಶದ ಜನತೆಗೆ ಗೊತ್ತಾಗಿದೆ: ಮೋದಿ
ಘಾಜೀಪುರ , ಸೋಮವಾರ, 14 ನವೆಂಬರ್ 2016 (18:49 IST)
ಘಾಜೀಪುರ: ದೇಶದಲ್ಲಿ ಹಣದ ಕೊರತೆ ಎಂಬುದು ಇಲ್ಲ. ಆದರೆ ಹಣ ಎಲ್ಲಿದೆ ಎಂಬುದು ಇಷ್ಟು ದಿನದ ಪ್ರಶ್ನೆಯಾಗಿತ್ತು. ಈಗ ದೇಶದ ಜನತೆಗೆ  ಪ್ರಶ್ನೆಗೆ ಉತ್ತರ ಸಿಕ್ಕಂತಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಉತ್ತರ ಪ್ರದೇಶದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿತ್ತು. ಆದರೆ ಅದನ್ನು ಹೇಗೆ ಕಿತ್ತೊಗೆಯಬೇಕು ಎಂದು ಈವರೆಗೆ ಆಡಳಿತ ನಡೆಸಿದ್ದ ಕೇಂದ್ರ ಸರಕಾರಕ್ಕೆ ತಿಳಿದಿರಲಿಲ್ಲ. ಆದರೆ ಈಗಿನ ಕೇಂದ್ರ ಸರಕಾರ ಸಾಕಷ್ಟು ಸಮಸ್ಯೆಯನ್ನು ಮೈಮೇಲೆ ಹೊತ್ತುಕೊಂಡು ದನ್ನು ಕಿತ್ತೊಗೆಯಲು ಪ್ರಯತ್ನಿಸುತ್ತಿದೆ ಎಂದರು.
 
ಇಂದು ಮಾಜಿ ಪ್ರಧಾನಿ ನೆಹರು ಅವರ ಜನ್ಮದಿನ. ಪ್ರಧಾನಿ ಕುಟುಂಬದವರು ಈವರೆಗೆ ಮಾಡದ ಕಾರ್ಯವನ್ನು ನಾನು ಮಾಡುತ್ತಿದ್ದೇನೆ. ಆ ಮೂಲಕ ಅವರ ಆತ್ಮಕ್ಕೆ ಗೌರವ ಸಲ್ಲಿಸಲು ಬಯಸುತ್ತೇನೆ ಎಂದ ಮೋದಿ, ನೋಟು ಬದಲಾವಣೆ ಮಾಡಿದ ಕಾರಣ ಕೆಲವು ಪಕ್ಷಗಳು ಚಿಂತಾಕ್ರಾಂತವಾಗಿವೆ. ಮುಂದೇನು ಮಾಡುವುದು ಎಂಬ ಚಿಂತೆ ಅವರನ್ನು ಕಾಡುತ್ತಿದೆ. ಈ ನಡುವೆ ಸಾಮಾನ್ಯ ಜನರು ಎದುರಿಸುತ್ತಿರುವ ಅನಾನುಕೂಲತೆಗಳಿಗಾಗಿ ವಿಷಾದಿಸುತ್ತೇನೆ ಎಂದರು.
 
ಇಂದಿರಾ ಗಾಂಧಿ ಅವರು  ಸಂಸತ್ ಸೀಟು ಉಳಿಸಿಕೊಳ್ಳುವ ಸಲುವಾಗಿ ತುರ್ತು ಪರಿಸ್ಥಿತಿ ಘೋಷಿಸಿ, 19 ತಿಂಗಳು ದೇಶದ ಜನರನ್ನು ಜೈಲಿಗಟ್ಟಿದ್ದರು. ಯಾರೊಬ್ಬರಲ್ಲಿಯೂ ಅಭಿಪ್ರಾಯ ಕೇಳದೆ ಕಾಂಗ್ರೆಸ್ 25 ಪೈಸೆಯನ್ನು ರದ್ದು ಮಾಡಿತು. ಅವರ ಘನತೆಗೆ ತಕ್ಕಂತೆ ಅವರು ಮಾಡಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

150 ಕ್ಕೂ ಹೆಚ್ಚು ಸ್ಥಾನ ಗೆಲ್ಲುವುದು ಬಿಜೆಪಿ ಗುರಿ: ಬಿ.ಎಸ್.ಯಡಿಯೂರಪ್ಪ