Select Your Language

Notifications

webdunia
webdunia
webdunia
webdunia

ಗೋಮಾಂಸ ಸಾಗಿಸುತ್ತಿದ್ದ ಇಬ್ಬರು ಮುಸ್ಲಿಂ ಮಹಿಳೆಯರ ಮೇಲೆ ಹಲ್ಲೆ

ಗೋಮಾಂಸ ಸಾಗಿಸುತ್ತಿದ್ದ ಇಬ್ಬರು ಮುಸ್ಲಿಂ ಮಹಿಳೆಯರ ಮೇಲೆ ಹಲ್ಲೆ
ಮಂದಸೌರ್(ಮಧ್ಯಪ್ರದೇಶ) , ಬುಧವಾರ, 27 ಜುಲೈ 2016 (21:34 IST)
ಗೋಮಾಂಸವನ್ನು ಸರಬರಾಜು ಮಾಡುತ್ತಿದ್ದಾರೆ ಎನ್ನುವ ಉಹಾಪೋಹಗಳಿಂದಾಗಿ ಇಬ್ಬರು ಮುಸ್ಲಿಂ ಮಹಿಳೆಯರನ್ನು ಹಿಂದೂ ದಶ ಕಾರ್ಯಕರ್ತರು ಮನಬಂದಂತೆ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.
 
ಹಿಂದೂ ದಳ ಕಾರ್ಯಕರ್ತರ ಗುಂಪು, ಜನನಿಬಿಡ ರೈಲ್ವೆ ನಿಲ್ದಾಣದಲ್ಲಿ ಇಬ್ಬರು ಮುಸ್ಲಿಂ ಮಹಿಳೆಯರ ಮೇಲೆ ಹಲ್ಲೆ ನಡೆಸುತ್ತಿದ್ದರೂ ಸ್ಥಳದಲ್ಲಿದ್ದ ಪೊಲೀಸರು ಮೂಕಪ್ರೇಕ್ಷಕರಾಗಿ ನಿಂತಿದ್ದರು ಎಂದು ಮೂಲಗಳು ತಿಳಿಸಿವೆ.  
 
ಪ್ರೇಕ್ಷಕರಾಗಿ ನಿಂತಿದ್ದವರಲ್ಲಿ ಒಬ್ಬರು ಘಟನೆಯ ಬಗ್ಗೆ ವಿಡಿಯೋ ತೆಗೆದಿದ್ದು, ಪೊಲೀಸರು ನಾಟಕೀಯವಾಗಿ ಹಲ್ಲೆಯನ್ನು ತಡೆಯಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ಸುಮಾರು ಅರ್ಧ ಗಂಟೆಗಳ ಕಾಲ ಮುಸ್ಲಿಂ ಮಹಿಳೆಯರನ್ನು ಥಳಿಸುತ್ತಿದ್ದರೂ ಅವರ ರಕ್ಷಣೆಗೆ ಯಾರು ಬರಲಿಲ್ಲ ಎಂದು ನೆರೆದಿದ್ದ ಜನತೆ ತಿಳಿಸಿದ್ದಾರೆ.
 
ಸ್ಥಳೀಯ ಪೊಲೀಸ್ ಮೂಲಗಳ ಪ್ರಕಾರ, ಇಬ್ಬರು ಮಹಿಳೆಯರಿಂದ ಸುಮಾರು 30 ಕೆಜಿ ಗೋಮಾಂಸವನ್ನು ಜಪ್ತಿ ಮಾಡಿಕೊಳ್ಳಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 
ಇಬ್ಬರು ಮುಸ್ಲಿಂ ಮಹಿಳೆಯರು ಗೋಮಾಂಸವನ್ನು ಒಯ್ಯುತ್ತಿರುವುದು ಖಚಿತವಾಗಿದೆ ಎಂದು ಗೃಹ ಸಚಿವ ಭೂಪಿಂದರ್ ಸಿಂಗ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ದಲಿತರ ಮೇಲೆ ದೌರ್ಜನ್ಯ ಹೆಚ್ಚಳ: ಪ್ರಧಾನಿ ಮೋದಿ ಮೌನ ಯಾಕೆ ಎಂದ ಮಾಯಾವತಿ